ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಆಪರೇಶನ್ ನಡೆಯುವಾಗ ಕಣ್ಣೀರು ಹಾಕಿದ್ದಕ್ಕೆ ಎಕ್ಸ್ಟ್ರಾ ಬಿಲ್ ಹಾಕಿದ ಆಸ್ಪತ್ರೆ

ಜಗತ್ತಿನಲ್ಲಿ ನಡೆಯುವ ಕೆಲವು ಸಂಗತಿಗಳು ನಮ್ಮನ್ನಾ ದಿಗ್ಬ್ರಾಂತರನ್ನಾಗಿಸಿ ಬಿಡುತ್ತವೆ. ಸದ್ಯ ಇಲ್ಲೊಂದು ಘಟನೆಯಲ್ಲಿ ಆಪರೇಶನ್ ವೇಳೆ ಮಿಜ್ ಎಂಬ ಮಹಿಳೆ ಕಣ್ಣಿರು ಹಾಕಿದ್ದಕ್ಕೆ ಆಸ್ಪತ್ರೆ ಯವರು ಎಕ್ಸ್ಟ್ರಾ ಬಿಲ್ ಮಾಡಿದ ಘಟನೆ ಅಮೆರಿಕಾದಲ್ಲಿ ನಡೆದಿದೆ. ಹೌದು ಜಗತ್ತಿನ ಅತಿ ಮುಂದುವರಿದ ರಾಷ್ಟ್ರವೆಂದು ಕರೆಸಿಕೊಳ್ಳುವ ಅಮೇರಿಕಾದ ಆಸ್ಪತ್ರೆಯೊಂದರಲ್ಲಿ ಮಚ್ಚೆ ತೆಗೆಸಿಕೊಳ್ಳುವ ಒಂದು ಚಿಕ್ಕ ಆಪರೇಶನ್ ಗೆ ಅಂತ ಮಹಿಳೆಯೊಬ್ಬರು ದಾಖಲಾಗಿದ್ದರು.

ಆಪರೇಷನ್ ನಡೆಯುವಾಗ ಏನನ್ನೋ ನೆನೆದು ಮಹಿಳೆ ಕಣ್ನೀರು ಹಾಕಿದ್ದಾರೆ. ಆ ಆಸ್ಪತ್ರೆಯವರಿಗೆ ಅಷ್ಟೇ ಬೇಕಿತ್ತು. ಆಸ್ಪತ್ರೆ ನೀಡಿದ ಬಿಲ್ ನಲ್ಲಿ ಮಿಜ್ ಕಣ್ಣೀರು ಹಾಕಿದ್ದಕ್ಕೆ 11 ಡಾಲರ್ ಗಳನ್ನು ಸೇರಿಸಿದೆ! ನಮ್ಮ ದೇಶದ ಕರೆನ್ಸಿಯಲ್ಲಾದರೆ ಸುಮಾರು 820 ರೂಪಾಯಿ. ಮಚ್ಚೆ ತೆಗೆಯುವುದಕ್ಕೆ 223 ಡಾಲರ್, ಅತ್ತಿದ್ದಕ್ಕೆ 11 ಡಾಲರ್ ಅಂತ ಬಿಲ್ ನಲ್ಲಿ ಸ್ಪಷ್ಟವಾಗಿ ನಮೂದಿಸಲಾಗಿದೆ.

ಮಿಜ್, ಸದರಿ ಬಿಲ್ಲನ್ನು ಸೋಷಿಯಲ್ ಮೀಡಿಯಾನಲ್ಲಿ ಶೇರ್ ಮಾಡಿದ್ದಾರೆ. ನೆಟ್ಟಿಗರು ಅದನ್ನು ನೋಡಿ ಹೌಹಾರಿದ್ದಾರೆ. ಅವರಲ್ಲಿ ಹಲವು ಜನ ಆಸ್ಪತ್ರೆಯನ್ನು ತರಾಟೆಗೆ ತೆಗೆದುಕೊಂಡಿದ್ದರೆ ಇನ್ನೂ ಕೆಲವರು ತಾವು ಸಹ ಅಂಥ ಸಂದರ್ಭಗಳನ್ನು ಎದುರಿಸಿರುವ ಬಗ್ಗೆ ಹೇಳಿಕೊಂಡಿದ್ದಾರೆ.

Edited By : Nirmala Aralikatti
PublicNext

PublicNext

04/10/2021 06:20 pm

Cinque Terre

42.13 K

Cinque Terre

0