ವರದಿ: ರಹೀಂ ಉಜಿರೆ
ಶಂಕರಪುರ: ಗಂಡನ ಸಾವಿನ ಬಳಿಕ ಮಾನಸಿಕ ಸ್ಥಿಮಿತ ಕಳೆದುಕೊಂಡ ಈ ಮಹಿಳೆಯದ್ದು ಬರೋಬ್ಬರಿ 12 ವರ್ಷಗಳ ಅಜ್ಞಾತ ವಾಸ.ಎಲ್ಲೋ ಮೂಲೆಯ ಅಸ್ಸಾಮ್ ನ ಮಹಿಳೆ ಬಂದು ಸೇರಿದ್ದು ದಕ್ಷಿಣದ ಕರಾವಳಿಗೆ. ಹನ್ನೆರಡು ವರ್ಷಗಳ ಬಳಿಕ ತಾಯಿ ಮಗ ಒಂದಾದ ಕತೆ ರೋಚಕ....
ದೃಶ್ಯದಲ್ಲಿ ಕಾಣುತ್ತಿರುವ ಈಕೆಯ ಹೆಸರು ಬೇಗಂ. ಅಸ್ಸಾಂನ ಮಹಿಳೆ. 2007ರಲ್ಲಿ ಗಂಡನ ಸಾವಿನ ಬಳಿಕ, ಬೇಗಂ ಮಾನಸಿವಾಗಿ ಕುಗ್ಗಿ ಹೋಗಿದ್ದರು. 2008ರಲ್ಲಿ ಮನೆಯಿಂದ ಹೊರ ಬಂದ ಆಕೆ ಊರೂರು ಅಲೆದು, ಕೊನೆಗೆ ಉಡುಪಿ ಶಂಕರಪುರದಲ್ಲಿ ಇರುವ ವಿಶ್ವಾಸದ ಮನೆ ಎಂಬ ನಿರ್ಗತಿಕರ ,ಮಾನಸಿಕ ಅಸ್ವಸ್ಥರ ಆಶ್ರಯ ಕೇಂದ್ರದಲ್ಲಿ ಆಶ್ರಯ ಪಡೆದರು.ಬಂಗಾಳಿ ಭಾಷೆ ಬಿಟ್ಟರೆ ಹಿಂದಿ ಬರುತ್ತಿರಲ್ಲ. ಆಕೆಯನ್ನು ಉಪಚರಿಸಿ,ಅನ್ನಾಹಾರ ನೀಡಿ ಆಶ್ರಯ ನೀಡಿದ್ದ ವಿಶ್ವಾಸದ ಮನೆಯವರು,ಇದೀಗ ಅವರ ಮಗನನ್ನು ಪತ್ತೆ ಮಾಡಲು ಯಶಸ್ವಿಯಾಗಿದ್ದಾರೆ.
ಬೇಗಂ ಅವರ ಐವರು ಮಕ್ಕಳಲ್ಲಿ ಎರಡನೇ ಮಗ ತಹಜ್ಜುದ್ದೀನ್ ತಾಯಿಯನ್ನು ಮತ್ತೆ ಮನೆಗೆ ಕರೆದುಕೊಂಡು ಹೋಗಲು ಉಡುಪಿಗೆ ಬಂದಿದ್ದಾನೆ.ತಾಯಿ ನಮ್ಮನ್ನು ಬಿಟ್ಟು ಹೋಗುವಾಗ ನನಗೆ 12 ವರ್ಷ ಆಗಿತ್ತು. ಅಂದಿನಿಂದ ತಾಯಿಯನ್ನು ಸಾಕಷ್ಟು ಹುಡುಕಾಟ ನಡೆಸಿದ್ದೆವು ಆದರೆ ಸಾಧ್ಯವಾಗಿಲ್ಲ .ಕೊನೆಗೂ, ವಿಶ್ವಾಸದ ಮನೆ ತಾಯಿಯನ್ನು ನೀಡಿದೆ ಎಂದು ಕಣ್ಣೀರು ಹಾಕಿದ..
ಒಟ್ಟಿನಲ್ಲಿ ತಾಯಿಯ ಇಳಿ ವಯಸ್ಸಿನಲ್ಲಿ ಮಕ್ಕಳಿಗೆ ತಾಯಿ ಸೇವೆ ಮಾಡುವ ಸೌಭಾಗ್ಯ ಸಿಕ್ಕಿದೆ. ತಾಯಿಗೆ ಮಕ್ಕಳ ಪ್ರೀತಿ ದಕ್ಕಿದೆ. ವಿಶ್ವಾಸದ ಮನೆಗೂ ತಾಯಿ ಮಕ್ಕಳನ್ನು ಒಂದಾಗಿಸಿದ ಸಂತೃಪ್ತಿ ಇದೆ...
PublicNext
22/09/2021 09:27 am