ಹಾಸನ: ಲಾಟರಿ ಮೂಲಕ ತಾನು ಮದುವೆಯಾಗುವ ಹುಡುಗಿಯನ್ನು ಆಯ್ಕೆ ಮಾಡಿದ ಸಂಗತಿ ನೀವೆಲ್ಲಾದರೂ ಕೇಳಿದ್ದೀರಾ? ನೋಡಿದ್ದೀರಾ? ಆದ್ರೆ ಅಂತದ್ದೊಂದು ಘಟನೆ ಹಾಸನದಲ್ಲಿ ನಡೆದಿದೆ.
ಇಬ್ಬರು ಯುವತಿಯರನ್ನು ಲವ್ ಮಾಡಿದ್ದ ಯುವಕ ಇಬ್ಬರಿಗೂ ಸಿಕ್ಕಿಬಿದ್ದಿದ್ದಾನೆ. ನಂತರ ಲಾಟರಿ ಮೂಲಕ ಒಬ್ಬ ಯುವತಿಯನ್ನು ಆಯ್ಕೆ ಮಾಡಿಕೊಳ್ಳೋದಾಗಿ ಹೇಳಿ ಆಮೇಲೆ ಏನೇನೋ ಆಗಿ ಕೊನೆಗೆ ಇಬ್ಬರಲ್ಲಿ ಒಬ್ಬ ಯುವತಿಯನ್ನು ಮದುವೆ ಆಗಿದ್ದಾನೆ.
ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನಲ್ಲಿ ಈ ಘಟನೆ ನಡೆದಿದ್ದು ಮದುವೆ ಮೂಲಕ ಸುಖಾಂತ್ಯ ಕಂಡಿದೆ. ಇಬ್ಬರನ್ನು ಪ್ರೀತಿಸಿದ್ದ ಯುವಕನಿಗೆ ತನ್ನನ್ನೇ ಮದುವೆ ಆಗುವಂತೆ ಇಬ್ಬರೂ ಯುವತಿಯರು ದುಂಬಾಲು ಬಿದ್ದಿದ್ದಾರೆ. ಈ ನಡುವೆ ಓರ್ವ ಯುವತಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ನಂತರ ಹಿರಿಯರು ಕೂಡಿ ಈ ಸಮಸ್ಯೆ ಬಗೆಹರಿಸಲು ಮುಂದಾಗಿದ್ದಾರೆ.
ಮಾತುಕತೆ ಮೂಲಕ ಸಮಸ್ಯೆಗೆ ಪರಿಹಾರ ಸಿಗದಿದ್ದಾಗ ಲಾಟರಿ ಎತ್ತುವ ನಿರ್ಣಯಕ್ಕೆ ಬರಲಾಗಿದೆ. ಲಾಟರಿ ಎತ್ತುತ್ತಿದ್ದಂತೇ ಅದನ್ನು ನಿಲ್ಲಿಸಿದ ಯುವಕ ವಿಷ ಸೇವಿಸಿದ ಯುವತಿಯನ್ನೇ ಮದುವೆ ಆಗೋದಾಗಿ ಹೇಳಿದ್ದಾನೆ. ಅಲ್ಲಿಗೆ ಸಮಸ್ಯೆ ಬಗೆಹರಿದಿದೆ. ಇನ್ನೋರ್ವ ಯುವತಿ ಲವರ್ ಬಾಯ್ ಕೆನ್ನೆಗೆ ಬಾರಿಸಿ ಅಲ್ಲಿಂದ ಹೋಗಿದ್ದಾಳೆ.
PublicNext
05/09/2021 03:05 pm