ಡೆಹ್ರಾಡೂನ್: ಉಕ್ಕಿ ಹರಿಯುತ್ತಿರುವ ನದಿ ದಾಟಲಾರದೆ 12 ಸಾವಿರ ಅಡಿ ಎತ್ತರದ ಪ್ರದೇಶದಲ್ಲಿ ಸಿಲುಕಿದ್ದ ನಾಲ್ವರನ್ನು ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ (ITBP) ಸಿಬ್ಬಂದಿ ರಕ್ಷಿಸಿದ್ದಾರೆ.
ಉತ್ತರಾಖಂಡದ ಪಿಥೋರಗರ್ ಜಿಲ್ಲೆಯ ಮಿಲಂ ಗ್ರಾಮದ ಮೂವರು ಪುರುಷರು ಮತ್ತು ಓರ್ವ ಮಹಿಳೆ 12 ಸಾವಿರ ಅಡಿ ಎತ್ತರ ಪ್ರದೇಶದಲ್ಲಿ ಸಿಲುಕಿದ್ದರು. ಈ ಬಗ್ಗೆ ಮಾಹಿತಿ ಪಡೆದ ಐಟಿಬಿಪಿಯ 14ನೇ ಬೆಟಾಲಿಯನ್‌ನ ಕೆಲ ಸಿಬ್ಬಂದಿ ಬುಧವಾರ ಎರಡು ಗಂಟೆ ಸುಮಾರಿಗೆ ರಕ್ಷಣೆ ಮಾಡಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಐಟಿಬಿಪಿ ವಕ್ತಾರ ವಿವೇಕ್ ಪಾಂಡೆ, ಗಿಡಮೂಲಿಕೆಗಳನ್ನು ತರಲು ಹೋಗಿದ್ದ ನಾಲ್ವರು, ಉಕ್ಕಿ ಹರಿಯುವ ನದಿಯನ್ನು ದಾಟಲಾರದೆ ಅಂದಾಜು 7 ಗಂಟೆಗಳ ಕಾಲ ಅಲ್ಲಿಯೇ ಸಿಲುಕಿದ್ದರು. ಐಟಿಬಿಪಿಯ ಸೇನೆ ಹತ್ತಿರದಲ್ಲಿಯೇ ಇದ್ದುದರಿಂದ ನಾಲ್ವರನ್ನು ರಕ್ಷಿಸಿದೆ ಎಂದು ತಿಳಿಸಿದರು.
PublicNext
02/09/2021 05:46 pm