ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

'ಮನಸ್ಸು ಭಾರವಾಯ್ತು' .. ಅಪ್ಪಾ ಕೇಕ್ ತಿನ್ನಪ್ಪಾ….ಸಮಾಧಿ ಮುಂದೆ ಮಗಳ ಬರ್ತ್ ಡೇ…

ಕೊಪ್ಪಳ: ಹೆಮ್ಮಾರಿ ಸೋಂಕಿನ ಅಟ್ಟಹಾಸದಲ್ಲಿ ಅನೇಕರ ಬದುಕು ಅಂತ್ಯವಾಯಿತು..ಕೆಲವರ ಬದುಕು ಅಂಧಕಾರದಲ್ಲಿ ಮುಳುಗಿತು. ಸದ್ಯ ಕೋವಿಡ್ ನಿಂದ ತಂದೆಯನ್ನು ಕಳೆದುಕೊಂಡ ಮಗು ಸಮಾಧಿ ಮುಂದೆ ಬರ್ತ್ ಡೇ ಆಚರಿ ತಂದೆಗೆ ಕೇಕ್ ತಿನ್ನಿಸಿದ ಘಟನೆ ಕರುಳು ಚುರ್ ಎನ್ನುವಂತೆ ಮಾಡಿದೆ.

ಹೌದು ಕುಷ್ಟಗಿ ಪಟ್ಟಣದ ಬಾಲಕಿ ಸ್ಪಂದನಾ ತನ್ನ 8ನೇ ವರ್ಷದ ಬರ್ತ್ ಡೇ ಪ್ರಯುಕ್ತ ತಂದೆಯ ಸಮಾಧಿ ಮುಂದೆ ಕೇಕ್ ಕತ್ತರಿಸಿದ್ದಾಳೆ.

ಸ್ಪಂದನಾ ತಂದೆ ಮಹೇಶ ಕೊನಸಾಗರ ಅವರು ಕಳೆದ ಮೇ ತಿಂಗಳಲ್ಲಿ ಕೊರೊನಾ ಸೋಂಕಿಗೆ ಬಲಿಯಾಗಿದ್ದರು. ಸದ್ಯದ ಸಂಗತಿ ಕಂಡ ನೆಟ್ಟಿಗರು ಮರುಕು ವ್ಯಕ್ತಪಡಿಸುತ್ತಿದ್ದಾರೆ. ತಂದೆ ಕೋವಿಡ್ ನಿಂದ ಮೃತಪಟ್ಟು ಮಣ್ಣಲ್ಲಿ ಮಣ್ಣಾಗಿದ್ದರೂ, ಇವರ ಮಗಳು ಆ ಸಮಾಧಿಗೇ ಕೇಕ್ ಅನ್ನು ತಿನ್ನಿಸುವ ಪರಿ ಕಣ್ಣೀರು ತರಿಸುವಂತೆದೆ.

ಕಂದನಿಂದ ತಂದೆಯಿಂದ ದೂರ ಮಾಡಿದ ದುರ್ವಿಧಿಗೂ ಧಿಕ್ಕಾರವಿರಲಿ.

Edited By : Nirmala Aralikatti
PublicNext

PublicNext

02/09/2021 02:34 pm

Cinque Terre

40.86 K

Cinque Terre

14