ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿಕ್ಕೋಡಿ: ಕಾಬುಲ್ ನಿಂದ ಸುರಕ್ಷಿತವಾಗಿ ಭಾರತಕ್ಕೆ ವಾಪಸ್ಸಾದ ಕೇರೂರಿನ ಯೋಧ !

ಚಿಕ್ಕೋಡಿ: ಅಫ್ಘಾನಿಸ್ತಾನದ ಭಾರತೀಯ ರಾಯಭಾರಿ ಕಚೇರಿಯಲ್ಲಿ ಭದ್ರತಾ ಸಿಬ್ಬಂದಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಚಿಕ್ಕೋಡಿ ತಾಲೂಕಿನ ಕೇರೂರ ಗ್ರಾಮದ ಯೋಧ ದಸ್ತಗಿರ ಮುಲ್ಲಾ ಅವರು ಸುರಕ್ಷಿತವಾಗಿ ಭಾರತಕ್ಕೆ ವಾಪಸ್ ಆಗಿದ್ದಾರೆ.

ಯೋಧ ದಸ್ತಗಿರ ಮುಲ್ಲಾ ಅವರನ್ನು ಭಾರತೀಯ ಸೇನೆಯು ತಾಯ್ನಾಡಿಗೆ ತರುವುಲ್ಲಿ ಯಶಸ್ವಿಯಾಗಿದೆ. ದೇಶದ ಭದ್ರಾ ದಳಕ್ಕೆ ದಸ್ತಗಿರಿ ಕುಟುಂಬಸ್ಥರು ಹಾಗೂ ಕೇರೂರ ಗ್ರಾಮಸ್ಥರ ಧನ್ಯವಾದಗಳನ್ನು ತಿಳಿಸಿದಾರೆ.

ಆಗಸ್ಟ್ 12ರಂದು ಯೋಧ ದಸ್ತಗಿರ ಮುಲ್ಲಾ ಅವರು ಕುಟುಂಬಸ್ಥರ ಜೊತೆ ಮಾತನಾಡಿ, ನನ್ನ ಪರಿಸ್ಥಿತಿ ಗಂಭೀರವಾಗಿದೆ ಎಂದು ಅಳಲನ್ನು ತೋಡಿಕೊಂಡಿದ್ದರು. ನಂತರ ಸಂಪರ್ಕಕ್ಕೆ ಸಿಗದಿದ್ದಾಗ ಮನೆಯವರು ಆತಂಕಕ್ಕೆ ಒಳಗಾಗಿದ್ದರು. ಆಗಸ್ಟ 15ರಂದು ಕರೆ ಮಾಡಿ ಭಾರತಕ್ಕೆ ವಾಪಸ್ ಆಗಿದ್ದೇನೆ ಎಂದು ಕುಟುಂಬಸ್ಥರಿಗೆ ತಿಳಿಸಿದ್ದಾರೆ. ಇದರಿಂದ ಕುಟುಂಬಸ್ಥರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.

ಯೋಧನ ಪತ್ನಿ ಜುಬೇದ್ ಮುಲ್ಲಾ 8 ತಿಂಗಳ ಗರ್ಭಿಣಿ. ಯೋಧನಿಗೆ ವೃದ್ಧ ತಂದೆ-ತಾಯಿ ಇದ್ದಾರೆ‌. ಇದೇ ಸಂದರ್ಭದಲ್ಲಿ ಯೋಧನ ಪತ್ನಿ ಜುಬೇದ್ ಮುಲ್ಲಾ ಅವರು ಮಾತನಾಡಿ, ಅಪ್ಘಾನಿಸ್ತಾನದಲ್ಲಿ ತಾಲಿಬಾನಿಗಳ ಹಿಂಸಾಚಾರಕ್ಕೆ ನಾನು ಆತಂತಕ್ಕೆ ಒಳಗಾಗಿದ್ದೆ. ನನ್ನ ಪತಿ ಕಾಬೂಲ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಪತಿಗೆ ಕರೆ ಮಾಡಿದಾಗ ತೊಂದರೆಯಲ್ಲಿ ಇದ್ದೇನೆ ಎಂದು ತಿಳಿಸಿದ್ದರು. ಆದರೆ ಆಗಸ್ಟ್ 15ರಂದು ಭಾರತಕ್ಕೆ ವಾಪಸ್ ಆಗಿದ್ದಾರೆ ಎಂದು ತಿಳಿಸಿದರು. ಈ ವಿಷಯ ನನಗೆ ಬಹಳಷ್ಟು ಸಂತೋಷ ತಂದಿದೆ ಎಂದು ಹೇಳಿದ್ದಾರೆ.

Edited By : Manjunath H D
PublicNext

PublicNext

22/08/2021 12:55 pm

Cinque Terre

107.66 K

Cinque Terre

12