ನಾಗ್ಲಾ ಸಲೇಹಿ (ಉತ್ತರ ಪ್ರದೇಶ): ಕೆಲವು ಸಂದರ್ಭಗಳಲ್ಲಿ ಮಾಧ್ಯಮಗಳು ಜನರನ್ನು ತಪ್ಪು ದಾರಿಗೆ ಎಳೆಯುತ್ತಿವೆ ಎನ್ನುವವರು ಈ ಸುದ್ದಿಯನ್ನು ನಂಬಲಾರರು ಆದರೆ ಇದು ಸತ್ಯ ಸಂಗತಿ.. ಹೌದು 8 ವರ್ಷದ ಹಿಂದೆ ಸಾವನ್ನಪ್ಪಿದ ಬಾಲಕನೊಬ್ಬ ಪುನರ್ಜನ್ಮ ಪಡೆದು ಮೊದಲ ತಂದೆ ತಾಯಿ ಮನೆ ಸೇರಿರುವ ಘಟನೆವೊಂದು ಬೆಳಕಿಗೆ ಬಂದಿದೆ. ಔಚಾ ಪೊಲೀಸ್ ಠಾಣಾ ವ್ಯಾಪ್ತಿಯ ನಾಗ್ಲಾ ಸಲೇಹಿ ಗ್ರಾಮದಲ್ಲಿ ಸುಮಾರು ಎಂಟು ವರ್ಷದ ಬಾಲಕ ಇದ್ದಕ್ಕಿದ್ದಂತೆಯೇ ಪ್ರತ್ಯಕ್ಷನಾಗಿದ್ದಾನೆ.
ಪ್ರಮೋದ್ ಕುಮಾರ್ ದಂಪತಿ ಮನೆಗೆ ಬಂದ ಈ ಬಾಲಕ ನೀವು ನನ್ನ ಅಪ್ಪಾ, ಅಮ್ಮಾಎಂದಿದ್ದಾನೆ. ಬಾಲಕನನ್ನು ನೋಡಿದ ದಂಪತಿಗೆ ತೀರಾ ವಿಚಿತ್ರ ಎನಿಸಿದೆ. ನಂತರ ಬಾಲಕ, ನಾನು 2013ರಲ್ಲಿ 13ನೇ ವಯಸ್ಸಿಗೆ ಕಾಲುವೆಯಲ್ಲಿ ಬಿದ್ದು ಸತ್ತ ನಿಮ್ಮ ಮಗ ರೋಹಿತ್ ಎಂದಿದ್ದಾನೆ.
ಈ ಬಾಲಕನ ಹೆಸರು ಕರ್ಮವೀರ. ಆತ ರಾಮನರೇಶ್ ಎಂಬುವವರ ಮಗ. ಅವನು ಬೆಳೆಯುತ್ತಾ ಹೋದಂತೆಲ್ಲಾ ಏನೇನೋ ಬಡಬಡಿಸುತ್ತಿದ್ದ. ತನ್ನ ಮನೆ ಅಲ್ಲಿದೆ, ನನ್ನ ಅಪ್ಪ-ಅಮ್ಮ ಅವರು, ಕೆರೆಯಲ್ಲಿ ಮುಳುಗಿ ಅಚಾನಕ್ ಆಗಿ ಸತ್ತಿದ್ದೆ ಎಂತೆಲ್ಲಾ ಹೇಳಿದ್ದಾನೆ. ಇದನ್ನು ಕೇಳಿ ಆತನ ತಂದೆಗೆ ದಿಗಿಲಾಗಿದೆ. ರಾಮನರೇಶ್ ಬಾಲಕ ಹೇಳಿದ ಜಾಗಕ್ಕೆ ಕರೆದುಕೊಂಡು ಹೋಗಿದ್ದಾರೆ.
ಇಷ್ಟು ಹೇಳುತ್ತಿದ್ದಂತೆಯೇ ಪ್ರಮೋದ್ ದಂಪತಿಗೆ ಅಚ್ಚರಿಯಾಗಿದೆ. ಈ ಬಾಲಕನ ಕಥೆ ಕೇಳಲು ಗ್ರಾಮಸ್ಥರು ಗುಂಪುಗೂಡಿ ಬೆರಗುಗಣ್ಣುಗಳಿಂದ ನೋಡಿದರು. ಇಷ್ಟೇ ಅಲ್ಲದೇ, ಬಾಲಕ ತಾನು ಹಿಂದಿನ ಜನ್ಮದಲ್ಲಿ ಕಲಿತ ಶಾಲೆ ಹಾಗೂ ಅಲ್ಲಿಯ ಮುಖ್ಯೋಪಾಧ್ಯಾಯರಾದ ಸುಭಾಷ್ ಯಾದವ್ ಅವರ ಮನೆಗೂ ಕರೆದುಕೊಂಡು ಹೋಗಿ ತಾನು ಹಿಂದೆ ಮಾಡುತ್ತಿದ್ದ ಎಲ್ಲಾ ವಿಷಯ ತಿಳಿಸಿದ್ದಾನೆ. ಸದ್ಯ ವಿಜ್ಞಾನಕ್ಕೆ ಇದೊಂದು ದೊಡ್ಡ ಸವಾಲಾಗಿದೆ.
PublicNext
20/08/2021 04:41 pm