ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವೃದ್ಧೆಯನ್ನು ಒದ್ದವನಿಗೆ ಪಾಠ ಕಲಿಸಿದ ಸೂಪರ್ ಸೈನಿಕ

ಆ ವೃದ್ಧೆ ಫುಟ್ ಪಾತ್ ಮೇಲೆ ಮಲಗಿದ್ದಳು. ಅಲ್ಲಿಗೆ ಬಂದ ಆ ಕಿರಾತಕ ಆಕೆಯನ್ನು ಒದ್ದಿದ್ದಾನೆ. ಅಷ್ಟೇ ಅಲ್ಲ. ಇಲ್ಲಿಂದ ಎದ್ದು ಹೋಗುವಂತೆ ಆಕೆಯ ಮೇಲೆ ನೀರು ಸುರುವಿದ್ದಾನೆ. ಕೂಡಲೇ ಎದ್ದು ಕುಳಿತ ಆ ವೃದ್ಧೆ ದಯವಿಟ್ಟು ನನಗೆ ಇಲ್ಲಿಯೇ ಮಲಗಲು ಅವಕಾಶ ಕೊಡಿ ಎಂದು ತನ್ನ ಮೇಲೆ ನೀರು ಸುರುವಿದ ಆತನ ಕಾಲು ಹಿಡಿದು ಕಾಲು ಹಿಡಿದು ಪರಿಪರಿಯಾಗಿ ಬೇಡಿಕೊಂಡಿದ್ದಾಳೆ. ಇಷ್ಟಾದರೂ ಬಿಡದ ಆ ಕಿರಾಕತ ಇಲ್ಲಿಂದ ಜಾಗ ಖಾಲಿ ಮಾಡು ಎಂದು ತಾಕೀತು ಮಾಡಿದ್ದಾನೆ.

ಕಾಕತಾಳೀಯವೇನೋ ಎಂಬಂತೆ ಅಲ್ಲಿಗೆ ಬಂದ ಸೈನಿಕರೊಬ್ಬರು ವೃದ್ಧೆಗೆ ತೊಂದರೆ ಕೊಡುತ್ತಿದ್ದ ಈತನಿಗೆ ಸರಿಯಾಗಿ ಪಾಠ ಕಲಿಸಿದ್ದಾರೆ. ನಂತರ ವೃದ್ಧೆಯನ್ನು ಎಬ್ಬಿಸಿ ಆಕೆಯ ಕೈಗೆ ಒಂಚೂರು ಹಣ ಕೊಟ್ಟು ಕಳುಹಿಸಿದ್ದಾರೆ. ಸದ್ಯ ಈ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ. ಮಾನವೀಯ ಮನುಷ್ಯರ ಮನಸ್ಸು ಗೆದ್ದಿದೆ.

Edited By : Shivu K
PublicNext

PublicNext

20/08/2021 11:24 am

Cinque Terre

65.09 K

Cinque Terre

12