ವಿಜಯವಾಡ: 4 ವರ್ಷಗಳ ಹಿಂದೆ ಅಪಘಾತದಲ್ಲಿ ಮೃತಪಟ್ಟ ತನ್ನ ಪತಿಗಾಗಿ ದೇವಸ್ಥಾನವನ್ನೇ ನಿರ್ಮಿಸಿದ ಮಹಿಳೆಯೋರ್ವಳು ಎಲ್ಲರ ಗಮನ ಸೆಳೆದಿದ್ದಾಳೆ. ಮಡಿದ ಪತಿಯ ಮೂರ್ತಿ ಇಟ್ಟು ಪ್ರತಿದಿನ ಪೂಜಿಸುತ್ತಿರುವ ದೃಶ್ಯ ಕಂಡುಬಂದದ್ದು ಆಂಧ್ರಪ್ರದೇಶದ ಪ್ರಕಾಸಂ ಜಿಲ್ಲೆಯಲ್ಲಿ. ಪದ್ಮಾವತಿ ಎನ್ನುವ ಮಹಿಳೆ ಪತಿಯನ್ನು ಮರೆಯಲು ಆಗದೇ ಅವರ ಹೆಸರಿನಲ್ಲಿ ದೇಗುಲ ಕಟ್ಟಿ ಪ್ರತಿದಿನ ಪೂಜಿಸುತ್ತಿದ್ದಾರೆ.
ಅಪಘಾತದಲ್ಲಿ ಅಂಕಿರೆಡ್ಡಿ ಸಾವನ್ನಪ್ಪಿದ ಕೆಲವು ದಿನಗಳ ಬಳಿಕ ಪದ್ಮಾವತಿ ಅವರ ಕನಸಿನಲ್ಲಿ ಅಂಕಿರೆಡ್ಡಿ ಬಂದು ತನಗಾಗಿ ದೇವಸ್ಥಾನ ಕಟ್ಟುವಂತೆ ಹೇಳಿದ್ದನಂತೆ. ಅದಕ್ಕಾಗಿ ದೇವಸ್ಥಾನ ನಿರ್ಮಿಸಿ, ಅದರಲ್ಲಿ ಅಂಕಿರೆಡ್ಡಿ ಮೂರ್ತಿ ಪ್ರತಿಷ್ಠಾಪಿಸಿ ದಿನವೂ ಪೂಜೆ ಸಲ್ಲಿಸುತ್ತಿದ್ದಾಳೆ. ನನ್ನ ಪತಿ ಬದುಕಿದ್ದಾಗಲೂ ಅವರನ್ನು ದೇವರೆಂದೇ ಭಾವಿಸಿದ್ದೆ ಎಂದು ಪದ್ಮಾವತಿ ಹೇಳುತ್ತಾರೆ.
ಅಂಕಿರೆಡ್ಡಿಯವರ ಜನ್ಮದಿನ ಸೇರಿ ಉಳಿದ ಕೆಲವು ವಿಶೇಷ ದಿನಗಳಲ್ಲಿ ವಿಗ್ರಹಕ್ಕೆ ಅಭಿಷೇಕ, ವಿಶೇಷ ಪೂಜೆ ನಡೆಯುತ್ತದೆ. ಪ್ರತಿ ಹುಣ್ಣಿಮೆಯಂದು ಬಡಜನರಿಗೆ ಊಟ ಹಾಕಲಾಗುತ್ತದೆ.
PublicNext
12/08/2021 01:18 pm