ಅದೆಷ್ಟೋ ಅದ್ಭುತ ಜೀವಜಂತುಗಳಿಗೆ ಸಮುದ್ರ ಆಶ್ರಯ ನೀಡಿದೆ. ಈ ಮಾತಿಗೆ ಪುಷ್ಠಿ ಎಂಬಂತೆ ಇಂಡೋನೇಷಿಯಾದಲ್ಲಿ ಮೀನುಗಾರರೊಬ್ಬರ ಬಲೆಗೆ ವಿಚಿತ್ರ ಮತ್ತು ವಿಲಕ್ಷಣವಾದ ಮೀನಿನ ಮರಿಯೊಂದು ಬಿದ್ದಿದೆ. ಇದು ಮನುಷ್ಯರ ಮುಖವನ್ನು ಹೋಲುವಂತಿದ್ದು, ಜನರನ್ನು ಬೆಚ್ಚಿಬೀಳುವಂತೆ ಮಾಡಿದೆ.
ಇಂಡೋನೇಷ್ಯಾದ ಪೂರ್ವ ನುಸಾ ತೆಂಗಾರ ಪ್ರಾಂತ್ಯದ ಮೀನುಗಾರ ಅಬ್ದುಲ್ಲಾ ನೂರನ್ ಬಲೆಗೆ ಈ ಮೀನು ಸಿಕ್ಕಿದೆ. ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಅಲ್ಲದೇ ಈ ಫೋಟೋವನ್ನು ನೋಡಿದ ನೆಟ್ಟಿಗರು ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿರುವ ಮೀನುಗಾರ ಅಬ್ದುಲ್, ''ಬೆಲೆಯಲ್ಲಿ ಆಕಸ್ಮಿಕವಾಗಿ ಗರ್ಭಿಣಿ ಶಾರ್ಕ್ ಮೀನೊಂದು ಸಿಕ್ಕಿಬಿದ್ದಿತ್ತು. ಅದರ ಹೊಟ್ಟೆ ಬಗೆದಾಗ ಮೂರು ಮೀನಿನ ಮರಿಗಳು ಪತ್ತೆಯಾಗಿವೆ. ಅದರಲ್ಲಿ ಎರಡು ಮೀನುಗಳು ಸಾಮಾನ್ಯ ಶಾರ್ಕ್ ಮರಿಯಂತೆಯೇ ಇದ್ದರೆ, ಇನ್ನೊಂದು ಮಾತ್ರ ಮನುಷ್ಯರ ಮುಖವನ್ನು ಹೋಲುವಂತಿತ್ತು'' ಎಂದು ತಿಳಿಸಿದ್ದಾಗಿ ವರದಿಯಾಗಿದೆ.
PublicNext
28/02/2021 03:31 pm