ಶ್ರೀರಂಗಪಟ್ಟಣ: ಇದೊಂದು ಭಯ ಮೂಡಿಸುವ ದೃಶ್ಯ. ನೀವು ಇಂತಹದ್ದನ್ನು ಸಿನೆಮಾದಲ್ಲಿ ಮಾತ್ರ ನೋಡಿರಲು ಸಾಧ್ಯ. ಹೌದು.
ಮೈಸೂರಿನ ಶ್ರೀರಂಗಪಟ್ಟಣ ತಾಲೂಕಿನ ನಗುವನಹಳ್ಳಿ ಎಂಬಲ್ಲಿ ಗೋಪಾಲ್ ಎಂಬುವರ ತೋಟದ ಮನೆಯ ಬಳಿ ಆತ್ಮ ಸಂಚಾರದ ದೃಶ್ಯ ವೊಂದು ಸೆರೆಯಾಗಿದೆ. ಈ ಸಿಸಿಟಿವಿಯಲ್ಲಿ ಕಾಣಿಸಿದ್ದು ದೆವ್ವ ಸಂಚಾರದ ದೃಶ್ಯನಾ..? ಎಂಬುದು ಎಲ್ಲರ ಕುತೂಹಲ.
ಸಿಸಿಟಿವಿಯಲ್ಲಿ ಸೆರೆಯಾದ ದೆವ್ವದ ದೃಶ್ಯದಿಂದ ಜನರು ಭಯಭೀತಗೊಂಡಿದ್ದಾರೆ.
ಜನವರಿ 31ರಂದು ಸಿಸಿಟಿವಿಯಲ್ಲಿ ದೆವ್ವದ ದೃಶ್ಯ ಪತ್ತೆಯಾಗಿದೆ. ಇದೀಗ ಭಯಗೊಂಡು ಆ ಮನೆಯನ್ನೇ ತೊರೆಯಲು ಕುಟುಂಬ ಸಿದ್ಧವಾಗಿದೆ. ಯಾಕೆಂದರೆ ಕಳೆದ 2-3 ತಿಂಗಳಿನಿಂದ ಆ ಸ್ಥಳದ ಬಳಿ ಮೂರ್ನಾಲ್ಕು ಜನರು ಆತ್ಮಹತ್ಯೆ ಮಾಡಿಕೊಂಡಿದ್ದರೆ. ಇದೀಗ ಸಿಸಿಟಿವಿ ದೃಶ್ಯ ನೋಡಿ ಹಗಲಲ್ಲಿ ಇಲ್ಲಿ ಸಂಚರಿಸಲು ಜನರು ಭಯಪಡುತ್ತಿದ್ದಾರೆ.
PublicNext
22/02/2021 05:36 pm