ನೆನಪುಗಳನ್ನು ಪ್ರೀತಿಸುವವರು ಅವುಗಳನ್ನು ಸಧಾ ನೆನೆಯುತ್ತಲೇ ಇರುತ್ತಾರೆ ಇನ್ನು ಕೆಲವು ನೆನಪುಗಳು ಎಂದಿಗೂ ಮಾಸುವುದಿಲ್ಲ ಅಂತಹ ಅದ್ಬುತ ನೆನಪುಗಳ ಬುತ್ತಿ ಕಟ್ಟಿಕೊಟ್ಟ ಸ್ಥಳಗಳು ಅಷ್ಟೇ ಮುಖ್ಯ.ಇಲ್ಲೊಂದು ದಂಪತಿ ತಮ್ಮ ಸ್ವೀಟ್ ಮೆಮೋರಿಗಳ ಸ್ಪಾಟ್ ಆದ ಹೋಟೆಲ್ ವೊಂದಕ್ಕೆ ಭಾರಿ ಮೊತ್ತದ ಟಿಪ್ಸ್ ಕೊಟ್ಟು ದೊಡ್ಡತನ ಮೆರೆದಿದ್ದಾರೆ.
ಸಾಮಾನ್ಯವಾಗಿ ಎಲ್ಲರಿಗೂ ಒಂದೊಂದು ಹೋಟೆಲ್ ಗಳು ಫೇವರಿಟ್ ಆಗಿರುತ್ತೆ. ಕಾಲೇಜು ಟೈಂ ಅಥವಾ ಪ್ರೀತಿಸಿದವರ ಜೊತೆಗೆ ಮೊದಲ ಭೇಟಿ ಹೀಗೆ ಏನಾದರೊಂದು ನೆನಪಿನ ಬುತ್ತಿಯನ್ನ ಆ ಹೋಟೆಲ್ಗಳೋ ಇಲ್ಲ ರೆಸ್ಟಾರೆಂಟ್ ಗಳು ಹೊಂದಿರುತ್ತವೆ.ಅದೇ ರೀತಿ ಚಿಕಾಗೋದ ದಂಪತಿ ಕೊರೊನಾದಂತಹ ಕಷ್ಟದ ಸಂದರ್ಭದಲ್ಲೂ ತಮ್ಮ ನೆಚ್ಚಿನ ಹೋಟೆಲ್ ಚೆನ್ನಾಗಿ ನಡೆದುಕೊಂಡು ಹೋಗಲಿ ಎಂದು ಬರೋಬ್ಬರಿ 1,45,534 ರೂಪಾಯಿಗಳನ್ನ ಟಿಪ್ಸ್ ರೂಪದಲ್ಲಿ ನೀಡಿದ್ದು ಪ್ರೇಮಿಗಳ ದಿನದಂದು ಈ ರಶೀದಿಯ ಫೋಟೋವನ್ನ ಫೇಸ್ ಬುಕ್ ನಲ್ಲಿ ಹಂಚಿಕೊಂಡಿದ್ದಾರೆ.
ಅಮೆರಿಕದ ಚಿಕಾಗೋದಲ್ಲಿ ದಂಪತಿ 9993.09 ರೂಪಾಯಿಯ ಆಹಾರಕ್ಕೆ 1,45,534 ರೂಪಾಯಿಗಳನ್ನ ಟಿಪ್ಸ್ ರೂಪದಲ್ಲಿ ನೀಡಿದ್ದಾರೆ. ಮಾತ್ರವಲ್ಲದೇ ರಶೀದಿಯ ಮೇಲೆ 20 ವರ್ಷಗಳ ಉತ್ತಮ ನೆನಪು, ಅತ್ಯುತ್ತಮ ಆಹಾರ ಹಾಗೂ ಸೇವೆಗಳನ್ನ ನೀಡಿದ್ದಕ್ಕಾಗಿ ರೆಸ್ಟಾರೆಂಟ್ ಗೆ ನಮ್ಮ ಧನ್ಯವಾದ ಎಂದು ಬರೆದಿದ್ದಾರೆ.
ಬರೋಬ್ಬರಿ 20 ವರ್ಷಗಳ ಹಿಂದೆ ಫೆಬ್ರವರಿ 12ನೇ ತಾರೀಖಿನಂದು ಈ ದಂಪತಿ ಇದೇ ರೆಸ್ಟಾರೆಂಟ್ ನಲ್ಲಿ ಭೇಟಿಯಾಗಿದ್ದರು. ಇದಾದ ಬಳಿಕ ಪ್ರತಿವರ್ಷ ಈ ದಂಪತಿ ಇದೇ ಸಮಯ ಹಾಗೂ ಇದೇ ದಿನಾಂಕಕ್ಕೆ ಸರಿಯಾಗಿ ಈ ಹೋಟೆಲ್ ಗೆ ಭೇಟಿ ನೀಡುತ್ತಿದ್ದರು. ಇದೀಗ ಇಷ್ಟು ದೊಡ್ಡ ಮೊತ್ತದ ಟಿಪ್ಸ್ ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಇನ್ನು ಹೋಟೆಲ್ ಮಾಲೀಕರು ದಂಪತಿ ಔದಾರ್ಯಕ್ಕೆ ಧನ್ಯವಾದ ಅರ್ಪಿಸಿದ್ದಾರೆ. ಕಷ್ಟದ ಸಮಯದಲ್ಲಿ ನೀವು ನೀಡಿರುವ ಉಡುಗೊರೆ ನಮ್ಮ ಸಿಬ್ಬಂದಿಯ ಉತ್ಸಾಹವನ್ನ ಹೆಚ್ಚು ಮಾಡಿದೆ. ನಿಮಗೆ ಎಂದಿಗೂ ಕೃತಜ್ಞರಾಗಿ ಇರಬೇಕು ಎಂದು ಹೇಳಿಕೊಂಡಿದೆ.
PublicNext
18/02/2021 02:00 pm