ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸತ್ತ ಮೇಲೂ ಮಾದರಿಯಾದ ಕಂದ ಧನಿಷ್ಥಾ

ಬದುಕು ಅರಳುವ ಮುನ್ನ,ಕನಸು ಚಿಗುರುವ ಮುನ್ನ ದೇಹ ಕಮರಿ ಹೋದಾಗ, ಅಂಗಾಂಗ ದಾನ ಮಾಡಿ ಇತರ ದೇಹಕ್ಕೆ ಜೀವ ನೀಡುವ ವ್ಯಕ್ತಿಗಳು ಮಾದರಿಯೆನ್ನಿಸಿಕೊಳ್ಳುತ್ತಾರೆ. ಅಂಥ ಮಾದರಿ ಆಗಿ, ಕೇವಲ ಇಪ್ಪತ್ತು ತಿಂಗಳು ಬದುಕಿ ಅನಿರೀಕ್ಷಿತವಾಗಿ ಇಹಲೋಕ ತ್ಯಜಿಸಿದ ಧನಿಷ್ಥಾ ಎಂಬ ಪುಟ್ಟ ಬಾಲಕಿ ನಿಜಕ್ಕೂ ಮಾದರಿ.

ಧನಿಷ್ಥಾ ಎನ್ನುವ ಕಂದ ಮನೆಯ ಬಾಲ್ಕನಿಯಿಂದ ಕೆಳಗೆ ಬೀಳುತ್ತಾಳೆ. ಆ ಕೂಡಲೇ ಮಗುವನ್ನು ದೆಹಲಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಜನವರಿ 11 ರಂದು ಧನಿಷ್ಥಾ ಕೊನೆಯುಸಿರೆಳೆಯುತ್ತಾಳೆ. ವೈದ್ಯರು ನಿಮ್ಮ ಮಗಳು ಬದುಕುವುದಿಲ್ಲ ಎನ್ನುವ ಸಿಡಿಲಿನ ಆಘಾತದ ಸುದ್ದಿ ಕೇಳಿದ ಪಾಲಕರು ಭಾರತದಲ್ಲಿ ಅಂಗಾಂಗಳ ಕೊರತೆಯಿಂದ ಸಾವನಪ್ಪುವವರ ಸಂಖ್ಯೆ ಹೆಚ್ಚಾಗುತ್ತಿರುವ ಬಗ್ಗೆ ತಿಳಿದು ತಮ್ಮ ಮಗಳ ಅಂಗಾಂಗವನ್ನು ದಾನ ಮಾಡಿ ಇತರರಿಗೆ ಜೀವ ಉಳಿಸಬಹುದು ಎಂದು ನಿರ್ಧಾರ ಮಾಡಿ ಧನಿಷ್ಥಾಳ ಹೃದಯ,ಯಕೃತ್ತು,ಎರಡು ಮೂತ್ರ ಪಿಂಡ, ಮತ್ತು ಎರಡು ಕಾರ್ನಿಯಾಗಳನ್ನು ಆಸ್ಪತ್ರೆಯಲ್ಲಿ ತೆಗೆದು ಅಗತ್ಯವಿದ್ದ ರೋಗಿಗಳಿಗೆ ನೀಡಲಾಯಿತು. ಮೂತ್ರ ಪಿಂಡಗಳನ್ನು ವಯಸ್ಕರಿಗೆ ನೀಡಿದರೆ, ಹೃದಯ ಹಾಗೂ ಯಕೃತ್ತು ಮಕ್ಕಳಿಗೆ ನೀಡಲಾಗಿದೆ. ಅಂಗಾಂಗ ದಾನದಿಂದ ಧನಿಷ್ಥಾ ಭಾರತದ ಮೊದಲ ಕಿರಿಯ ಕ್ಯಾಡಾವೆರ್ ಡೊನರ್ ಆಗಿದ್ದಾಳೆ.

Edited By : Nirmala Aralikatti
PublicNext

PublicNext

17/02/2021 08:56 pm

Cinque Terre

105.53 K

Cinque Terre

31

ಸಂಬಂಧಿತ ಸುದ್ದಿ