ಅಹಮದಾಬಾದ್ : ಪ್ರೀತಿ ಎನ್ನುವುದು ಹರಿಯುವ ನೀರಿನಂತಿರಬೇಕು ಅಂದಾಗ ಮಾತ್ರ ಅದು ಶುದ್ಧವಾಗಿರಲು ಸಾಧ್ಯ. ಪ್ರೇಮಿಗಳ ದಿನಕ್ಕೆ ಮಾತ್ರ ಪ್ರೀತಿ ಸೀಮಿತವಾಗದಿರಲಿ ಇಂದು ಪ್ರೇಮಿಗಳ ಪ್ರೇಮಿಗಳ ದಿನಾಚರಣೆ ಪ್ರೀತಿ ತುಭಿರುವ ಪ್ರತಿ ಮನಸ್ಸುಗಳಿಗೂ ಪ್ರೇಮಿಗಳ ದಿನಾಚರಣೆಯ ಶುಭಾಶಯಗಳು..
ಎರಡು ಮನಸ್ಸುಗಳ ನಡುವಿನ ಪರಸ್ಪರ ಹೊಂದಾಣಿಕೆ, ತ್ಯಾಗ, ಪ್ರೀತಿ, ರಕ್ಷಣೆ, ಪಾಲನೆ ಹಾಗೂ ಗೌರವ ನಿರಂತರವಾಗಿ ಕಾಪಾಡಿಕೊಂಡರೆ ಪ್ರೇಮಿಗಳ ದಿನಕ್ಕೆ ಒಂದು ಅರ್ಥ ಬರುತ್ತದೆ. ಸುಖದ ಜೊತೆ ಕಷ್ಟದ ದಿನಗಳಲ್ಲಿ ಕೈ ಹಿಡಿದು ನಡೆಸುವವನೇ/ನಡೆಸುವವಳೇ ನಿಜವಾದ ಪ್ರೇಮಿ. ಅಂತಹ ಪ್ರೇಮಿಗಳ ದಿನಕ್ಕೆ ಗುಜರಾತ್ ಮೂಲದ ವ್ಯಕ್ತಿ ಹೊಸ ಭಾಷ್ಯ ಬರೆದಿದ್ದಾರೆ.
ಹೌದು. ವ್ಯಾಲೆಂಟೈನ್ಸ್ ದಿನದಂದೇ ಗುಜರಾತ್ ಮೂಲದ ವ್ಯಕ್ತಿ, ಅನಾರೋಗ್ಯ ಪೀಡಿತ ಪತ್ನಿಗೆ ಕಿಡ್ನಿಯನ್ನು ದಾನ ಮಾಡಿದ್ದಾನೆ. ಫೆ. 14ರಂದೇ ಅವರ 23ನೇ ಮದುವೆ ವಾರ್ಷಿಕೋತ್ಸವವನ್ನು ದಂಪತಿ ಆಚರಿಸಿಕೊಳ್ಳುತ್ತಿದ್ದಾರೆ. ಕಳೆದ ಮೂರು ವರ್ಷಗಳಿಂದ ರೀತಾ ಪಟೇಲ್ ಗೆ ಕಿಡ್ನಿ ಸಮಸ್ಯೆ ಇದೆ. ಎಷ್ಟೇ ಚಿಕಿತ್ಸೆ ನೀಡಿದರೂ ಪ್ರಯೋಜನವಾಗಿಲ್ಲ ಸದ್ಯ ಪತಿ ವಿನೋದ್ ಪಟೇಲ್ ಪತ್ನಿಗೆ ಕಿಡ್ನಿ ದಾನಕ್ಕೆ ಮುಂದಾಗಿದ್ದಾರೆ.
ಇಂದು ಖಾಸಗಿ ಆಸ್ಪತ್ರೆಯೊಂದರಲ್ಲಿ ವಿನೋದ್ ತಮ್ಮ ಪತ್ನಿಗೆ ಕಿಡ್ನಿ ದಾನ ಮಾಡಲಿದ್ದಾರೆ. ವ್ಯಾಲೆಂಟೈನ್ಸ್ ದಿನದಂದು ಮೊದಲ ಬಾರಿಗೆ ಸರ್ಜರಿ ಮಾಡುತ್ತಿದ್ದು, ನಾವು ಉತ್ಸುಕರಾಗಿದ್ದೇವೆಂದು ವೈದ್ಯರೊಬ್ಬರ ಹೇಳಿದ್ದಾರೆ. ಪತ್ನಿ ನೋವು ಪಡುತ್ತಿರುವುದನ್ನು ನೋಡಲಾಗದೇ ಕಿಡ್ನಿ ದಾನ ಮಾಡುತ್ತಿರುವುದಾಗಿ ವಿನೋದ್ ಹೇಳಿದ್ದಾರೆ. ಪತಿಗೆ ಕೃತಜ್ಞತೆ ಸಲ್ಲಿಸಿರುವ ರೀಟಾ, ಕಷ್ಟದ ಸಮಯದಲ್ಲಿ ತನ್ನ ಬೆನ್ನಿಗೆ ನಿಂತಂತಹ ಅದ್ಭುತ ಪಾಲುದಾರನನ್ನು ಹೊಂದಿರುವ ನಾನು ಅದೃಷ್ಟಶಾಲಿ ಎಂದಿದ್ದಾರೆ.
PublicNext
14/02/2021 12:11 pm