ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಸ್ಟ್ಯಾಂಡಿನಲ್ಲಿ ಲವರ್ಸ್ ಲವ್ವಿಡವ್ವಿ: ಚುಂಬನಕ್ಕಿಲ್ಲ ಚಿತ್ತಭಂಗ

ಮಂಡ್ಯ: ಚುಂಬನ ಎಂಬುವುದು ಮನುಷ್ಯರ ಖಾಸಗಿ ವಿಚಾರ. ಆದ್ರೆ ವಿದೇಶಿಗರು ಅದನ್ನೆಲ್ಲ ಸಾರ್ವಜನಿಕ ಪ್ರದೇಶಗಳಲ್ಲೇ ಮಾಡಿ ಬಿಡ್ತಾರೆ. ಈಗ ನಮ್ಮ ದೇಶದಲ್ಲೂ ಅಂತಹ ಘಟನೆಗಳು ಅಲ್ಲಲ್ಲಿ ಕದ್ದು ಮುಚ್ಚಿ ನಡೆಯುತ್ತವೆ. ಆದರೆ ಇದೀಗ ಸಕ್ಕರೆ ನಾಡು ಮಂಡ್ಯದಲ್ಲಿ ಹಾಡಹಗಲಲ್ಲೇ ಅದರಲ್ಲೂ ಬಸ್ ನಿಲ್ದಾಣದಲ್ಲೇ ಪ್ರೇಮಿಗಳು ಕಿಸ್ ಮಾಡಿಕೊಂಡು ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿದ್ದಾರೆ.

ಹೌದು...ಮಂಡ್ಯದ ಜಿಲ್ಲೆಯ ಕೆ.ಆರ್.ಪೇಟೆ ಬಸ್ ನಿಲ್ದಾಣದಲ್ಲಿ ಪ್ರೇಮಿಗಳು ಮಟಮಟ ಮಧ್ಯಾಹ್ನವೇ ಪರಸ್ಪರ ಕಿಸ್ ಮಾಡಿಕೊಳ್ಳುವ ಮೂಲಕ ಸಾರ್ವಜನಿಕ ಸ್ಥಳದಲ್ಲಿ ಅಸಭ್ಯವಾಗಿ ವರ್ತಿಸಿದ್ದಾರೆ. ಇದರಿಂದ ಅಲ್ಲಿದ್ದ ಸಭ್ಯಸ್ಥರು ಮುಜುಗರ ಪಡುವಂತಾಗಿತ್ತು. ಪ್ರೇಮಿಗಳ ದಿನಕ್ಕೆ ಇನ್ನೇನು ಕೆಲವೇ ದಿನ ಬಾಕಿ. ಈ ವ್ಯಾಲೆಂಟೈನ್ಸ್ ದಿನದ ಹೊಸ್ತಿಲಲ್ಲಿ ಈ ಯುವ ಜೋಡಿ ಸಾರ್ವಜನಿಕ ಸ್ಥಳದಲ್ಲಿ ಮೈ ಮರೆತಿದೆ. ಈ ಪಾಗಲ್ ಪ್ರೇಮಿಗಳು ಕಿಸ್ ಮಾಡುತ್ತಿರುವ ದೃಶ್ಯವನ್ನ ಕೆ. ಆರ್ ಪೇಟೆಯ ಪಡ್ಡೆ ಹುಡುಗರು ತಮ್ಮ ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ. ಅದೇ ವಿಡಿಯೋ ಈಗ ಎಲ್ಲೆಡೆ ವೈರಲ್ ಆಗಿದೆ.

Edited By : Nagaraj Tulugeri
PublicNext

PublicNext

11/02/2021 10:31 am

Cinque Terre

90.45 K

Cinque Terre

12