ಚೆನ್ನೈ: ಮದುವೆ ಪ್ರತಿಯೊಬ್ಬರ ಬದುಕಿನಲ್ಲೋ ಒಂದು ಮಹತ್ತರವಾದ ಘಟ್ಟ. ಈ ಶುಭ ಸಮಾರಂಭದಲ್ಲಿ ಹೆತ್ತವರ ಪಾತ್ರ ಬಹುಮುಖ್ಯ.
ಹೆತ್ತವರಿಗಿಂತ ಮಿಗಿಲಾದ ಗಿಫ್ಟ್ ಬೇರೊಂದಿಲ್ಲ. ಆದರೆ ಅದೆಷ್ಟೋ ಮದುಮಕ್ಕಳಿಗೆ ಈ ಭಾಗ್ಯ ಸಿಗುವುದೇ ಇಲ್ಲ. ಅದಕ್ಕೆ ಕಾರಣ, ಹಲವು ಕೆಲವರು ಮದುವೆ ಮುಂಚೆಯೇ ಹೆತ್ತವರನ್ನು ಕಳೆದುಕೊಂಡಿರುತ್ತಾರೆ. ವಿಶೇಷವಾಗಿ ಮದುವೆಯಲ್ಲಿ ಅಪ್ಪ ಅಮ್ಮನಿಲ್ಲದ ಸನ್ನಿವೇಶ ನಿಭಾಯಿಸಲು ಮದುಮಗಳು ತುಸು ಹೆಚ್ಚು ಸಂಕಟ ಅನುಭವಿಸುತ್ತಾಳೆ.ಆದರೆ ಇಲ್ಲೊಂದು ಅಪರೂಪದ ಮದುವೆಯಲ್ಲಿ ಮೃತ ಅಪ್ಪನನ್ನು ಕರೆತರುವಲ್ಲಿ ಸಹೋದರಿ ಸೈ ಎನಿಸಿಕೊಂಡಿದ್ದಾಳೆ.
ಹೌದು ತಂಗಿಯ ಮೇಲಿನ ಅಕ್ಕರೆಯಿಂದ ಅಕ್ಕ ಮೃತ ಅಪ್ಪನನ್ನೇ ಕರೆತಂದು ಸುದ್ದಿಯಾಗಿದ್ದಾರೆ. ಅಕ್ಕನ ಈ ಕಾರ್ಯಕ್ಕೆ ಮದುಮಗಳಾದ ತಂಗಿ ಸೇರಿದಂತೆ ನೆರೆದಿರುವ ಜನ ಆನಂದಭಾಷ್ಪ ಹರಿಸಿದ್ದಾರೆ.ಇಂಥದ್ದೊಂದು ಅಪರೂಪದ ಘಟನೆ ತಮಿಳುನಾಡಿನ ಪುದುಕೊಟ್ಟಾಯಿಯಲ್ಲಿ ನಡೆದಿದೆ. ಭುವನೇಶ್ವರಿ ಮತ್ತು ಲಕ್ಷ್ಮಿಪ್ರಭಾ ತಂದೆಯನ್ನು ಕಳೆದುಕೊಂಡಿರುವ ಸಹೋದರಿಯರು.
ತಂಗಿ ಭುವನೇಶ್ವರಿ ಮದುವೆಯಲ್ಲಿ ಲಕ್ಷ್ಮಿಪ್ರಭಾ ಥೇಟ್ ತಂದೆಯದ್ದೇ ಪ್ರತಿರೂಪದಂತಿರುವ ಮೂರ್ತಿಯನ್ನುಆರು ಲಕ್ಷ ರೂ, ಖರ್ಚಿನಲ್ಲಿ ತಯಾರು ಮಾಡಿಸಿ ತಂಗಿಯ ಮದುವೆಯ ಸಂದರ್ಭದಲ್ಲಿ ಮಂಟಪಕ್ಕೆ ತಂದು ನಿಲ್ಲಿಸಿದ್ದಾರೆ. ಅದನ್ನು ನೋಡಿದರೆ ಎಂಥವರೂ ಮೂರ್ತಿ ಎನ್ನಲಾರರು. ತಂದೆಯೇ ಬಂದು ನಿಂತಂತೆ ಭಾಸವಾಗುತ್ತಿತ್ತು.
ಇದನ್ನು ಕಂಡ ಎಲ್ಲರ ಕಣ್ಣಾಲಿಗಳು ತೇವಗೊಂಡವು. ಇನ್ನು ಮದುಮಗಳ ಸಂತೋಷಕ್ಕೆ ಪಾರವೇ ಇರಲಿಲ್ಲ. ಈ ಅಕ್ಕ-ತಂಗಿಯ ಪ್ರೀತಿ ಸಾಮಾಜಿಕ ಜಾಲತಾಣದಲ್ಲಿ ಭಾರಿ ಸದ್ದು ಮಾಡುತ್ತಿದೆ. ತಂದೆ ಅನುಪಸ್ಥಿತಿ ತಂಗಿಗೆ ಕಾಡಬಾರದು ಎನ್ನುವ ಕಾರಣಕ್ಕೆ ಇಷ್ಟು ದುಬಾರಿಯಾದರೂ ಮೂರ್ತಿ ಮಾಡಿಸಿದ್ದೇನೆ. ತಂಗಿಯ ಸಂತೋಷದ ಮುಂದೆ ದುಡ್ಡು ಹೆಚ್ಚಲ್ಲ ಎಂದಿದ್ದಾರೆ ಲಕ್ಷ್ಮಿಪ್ರಭಾ.
PublicNext
09/02/2021 05:53 pm