ನವದೆಹಲಿ: ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವಿಡಿಯೋ ಫೋಟೋಗಳು ವೈರಲ್ ಆಗುತ್ತವೇ ಕೆಲವು ಕಾಮಿಡಿ,ಇನ್ನು ಕೆಲವು ಮಾನವೀಯತೆಯನ್ನು ನೆನಪಿಸುವಂತವುಗಳಾಗಿರುತ್ತವೆ. ಆದ್ರೆ ಇಲ್ಲೊಂದು ವೈರಲ್ ಆಗಿರುವ ಫೋಟೋ ನಿಮ್ಮ ಮೆದಳು, ಮತ್ತು ಕಣ್ಣಿಗೆ ಕೆಲಸ ಕೊಡುವಂತಿದೆ. ಹೌದು ಈ ಫೋಟೋದಿಂದಾಗಿ ನೆಟ್ಟಿಗರನ್ನು 'ದಿಗ್ಭ್ರಮೆ' ಮತ್ತು 'ಗೊಂದಲ'ಕ್ಕೀಡುಮಾಡಿದೆ.
ಫೋಟೋದಲ್ಲಿ ಏನಿದೆ?: ನಿಂತಿರುವ ಸ್ಕೂಟರ್ ಮೇಲೆ ಅರ್ಧ ಮಲಗಿದಂತಿರುವ ವ್ಯಕ್ತಿ ಒಂದು ಕಾಲನ್ನು ಸೀಟಿನ ಮೇಲೆ ಇಟ್ಟಿದ್ದಾರೆ. ಆತನ ಮಂಡಿಯು ಸ್ಕೂಟರ್ ಹ್ಯಾಂಡಲ್ ಗೆ ತಾಗಿದ್ದು, ಅದರ ಮೇಲೆ ಹೆಲ್ಮೆಟ್ ಇದೆ. ಇನ್ನೊಂದು ಕಾಲನ್ನು ನೆಲಕ್ಕೆ ಚಾಚಿದ್ದು, ಕೈಯಲ್ಲಿ ಮೊಬೈಲ್ ನೋಡುತ್ತಿದ್ದಾನೆ.
ಚಿತ್ರವನ್ನು ನೋಡುವ ಮೊದಲ ನೋಟದಲ್ಲಿ ಸ್ಕೂಟರ್ ನಲ್ಲಿ ಇಬ್ಬರು ವ್ಯಕ್ತಿಗಳು ಇರುವಂತೆ ಗೋಚರವಾಗುತ್ತದೆ. ಆದರೆ, ಸೂಕ್ಷ್ಮವಾಗಿ ನೋಡಿದರೆ ವಾಸ್ತವಾಗಿ ಅಲ್ಲಿರುವುದು ಒಬ್ಬನೇ, ಆದರೆ ನಮಗೆ ಇಬ್ಬರು ಇರುವಂತೆ ಕಾಣುತ್ತದೆ. ಹುಡುಗಿಯೊಬ್ಬಳು ಸ್ಕೂಟರ್ ಮೇಲೆ ಮಲಗಿರುವಂತೆಯು, ಪುರುಷ ಸ್ಕೂಟರ್ ಗೆ ಒರಗಿ ನಿಂತಿರುವಂತೆಯೂ ಕಾಣುತ್ತದೆ. ಆದರೆ, ಸೂಕ್ಷ್ಮವಾಗಿ ನೋಡಿದಾಗ ಫೋಟೋದಲ್ಲಿರುವುದು ಒಬ್ಬನೇ ವ್ಯಕ್ತಿ ಎಂಬುದು ಸ್ಪಷ್ಟವಾಗಿ ತಿಳಿಯುತ್ತದೆ.ಇನ್ನು ಈ ಫೋಟೋವನ್ನು ರೆಡಿಟ್ ಜಾಲತಾಣದಲ್ಲಿ ಹಂಚಿಕೊಳ್ಳಲಾಗಿದ್ದು, ಸಿಕ್ಕಾಪಟ್ಟೆ ವೈರಲ್ ಆಗಿದೆ. ಫೋಟೋ ನೋಡಿ ನಿಜಕ್ಕೂ ನಾವು ಶಾಕ್ ಆದವರೇ ಹೆಚ್ಚು.
PublicNext
07/02/2021 12:06 pm