ವಾಷಿಂಗ್ಟನ್: ಅಮೆರಿಕ ಮೂಲದ ಪಾಪ್ ಗಾಯಕ ಸೈಮರ್ ಬೈಸಿಲ್ ವುಡ್ಸ್ ಎಂಬಾತ ತನ್ನ ಹಣೆ ಮೇಲೆ ಬರೋಬ್ಬರಿ 175 ಕೋಟಿ ಮೌಲ್ಯದ ವಜ್ರವನ್ನು ಅಂಟಿಸಿಕೊಂಡಿದ್ದಾನೆ.
ಅಮೆರಿಕದ ಖ್ಯಾತ ಪಾಪ್ ಹಾಗೂ ರ್ಯಾಪರ್ ಸಿಂಗರ್ ಈ ಮೂಲಕ ಪ್ರಪಂಚದಾದ್ಯಂತ ಸುದ್ದಿಯಾಗಿದ್ದಾನೆ. ಕೇವಲ 25 ವರ್ಷ ವಯಸ್ಸಿನ ಈ ಗಾಯಕ 175 ಕೋಟಿ ಮೌಲ್ಯದ ಪಿಂಕ್ ವಜ್ರವನ್ನು ಹಣೆ ಮೇಲೆ ಅಂಟಿಸಿಕೊಂಡಿದ್ದಾನೆ.
ಲಿಲ್ ಯುಝಿ ವರ್ಟ್ ಎಂಬ ಹೆಸರಿನಿಂದ ಅಮೆರಿಕದ ಪಾಪ್ ಸಂಗೀತ ಕ್ಷೇತ್ರದಲ್ಲಿ ಈತ ಹೆಸರಾಗಿದ್ದಾನೆ. ತಾನೇ ಸ್ವಂತ ಸಾಹಿತ್ಯ ಬರೆದು ಹಾಡುವ ಪಾಪ್ ಸಂಗೀತಗಾರ ತನ್ನ ಹಣೆ ಮೇಲಿನ ಅತ್ಯಂತ ದುಬಾರಿ ವಜ್ರದ ಮೂಲಕ ಆಕರ್ಷಣೆಯ ಕೇಂದ್ರ ಬಿಂದುವಾಗಿದ್ದಾನೆ.
PublicNext
04/02/2021 06:05 pm