ಮುಂಬೈ: ಬೃಹನ್ ಮುಂಬೈ ಕಾರ್ಪೋರೇಷನ್ ( ಬಿಎಂಸಿ) ಬಜೆಟ್ ಮಂಡನೆ ವೇಳೆ ಜಂಟಿ ಆಯುಕ್ತ ರಮೇಶ್ ಪವಾರ್ ಅವರು ನೀರಿನ ಬದಲಾಗಿ ಸ್ಯಾನಿಟೈಝರ್ ಕುಡಿದಿದ್ದಾರೆ.
ಬಜೆಟ್ ಮಂಡನೆ ವೇಳೆ ಕೋವಿಡ್ ಮಾರ್ಗಸೂಚಿ ಅನುಸಾರ ಎಲ್ಲ ಅಧಿಕಾರಿಗಳ ಮುಂದೆ ಹ್ಯಾಂಡ್ ಸ್ಯಾನಿಟೈಝರ್ ಇಡಲಾಗಿತ್ತು. ಇದೇ ಬಾಟಲಿಯನ್ನು ನೀರಿನ ಬಾಟಲ್ ಎಂದುಕೊಂಡ ಜಂಟಿ ಆಯುಕ್ತ ರಮೇಶ್ ಪವಾರ್, ಹ್ಯಾಂಡ್ ಸ್ಯಾನಿಟೈಝರ್ ಅನ್ನು ಕುಡಿದುಬಿಟ್ಟಿದ್ದಾರೆ. ಕ್ಷಣಾರ್ಧದಲ್ಲೇ ಅದನ್ನು ಉಗುಳಿದ್ದಾರೆ. ಇದನ್ನು ಗಮನಿಸಿದ ಅಲ್ಲಿನ ಸಿಬ್ಬಂದಿ ತಕ್ಷಣ ನೀರಿನ ಬಾಟಲ್ ಕೊಟ್ಟಿದ್ದಾರೆ. ಸಿಬ್ಬಂದಿ ಕೊಟ್ಟ ನೀರು ಕುಡಿದ ರಮೇಶ್ ಪವಾರ್ ಸ್ವಲ್ಪ ಸಮಯದಲ್ಲಿ ಸುಧಾರಿಸಿಕೊಂಡಿದ್ದಾರೆ. ಆದ್ರೆ ಈ ಅಚಾತುರ್ಯದಿಂದ ರಮೇಶ್ ಪವಾರ್ ಕೆಲಹೊತ್ತು ಮುಜುಗುರ ಅನುಭವಿಸಬೇಕಾಯ್ತು.
PublicNext
03/02/2021 08:24 pm