ಕೊಪ್ಪಳ: ಎರಡು ಕಿಡ್ನಿ ವಿಫಲವಾಗಿ ಅನಾರೋಗ್ಯದಿಂದ ಬಳಲುತ್ತಿರುವ ಮಗನನ್ನು ಉಳಿಸಿಕೊಳ್ಳಲು ತಾಯಿ ತನ್ನ ಕಿಡ್ನಿಯನ್ನು ನೀಡಲು ಮುಂದಾಗಿದ್ದಾರೆ.
ಹೌದು. ಕೊಪ್ಪಳ ತಾಲೂಕಿನ ಓಜನಹಳ್ಳಿ ಗ್ರಾಮದ ಶರಣಪ್ಪಗೌಡ ಪಾರ್ವತಿ ದಂಪತಿಯ ಪುತ್ರ ಮಂಜುನಾಥ್ ಅವರ ಎರಡೂ ಕಿಡ್ನಿ ವಿಫಲವಾಗಿವೆ. ಎರಡು ತಿಂಗಳ ಹಿಂದೆ ತಲೆನೋವು ಎಂದು ಆಸ್ಪತ್ರೆಗೆ ದಾಖಲಾಗಿದ್ದಾಗ ಈ ವಿಚಾರ ಗೊತ್ತಾಗಿದೆ. ಇದೀಗ ಮಗನನ್ನು ಉಳಿಸಿಕೊಳ್ಳಲು ತಾಯಿ ಪಾರ್ವತಿ ತಮ್ಮ ಕಿಡ್ನಿ ನೀಡಲು ಮುಂದಾಗಿದ್ದಾರೆ.
ಬೆಂಗಳೂರಿನ ಆಸ್ಪತ್ರೆಯಲ್ಲಿ ಪರೀಕ್ಷೆ ಮಾಡಿಸಿದ್ದು, ಪಾರ್ವತಿ ಕಿಡ್ನಿ ಸರಿಹೊಂದುತ್ತದೆ ಎಂದು ವೈದ್ಯರು ಹೇಳಿದ್ದಾರೆ. ಆದರೆ ಚಿಕಿತ್ಸೆಗಾಗಿ ಏಳು ಲಕ್ಷ ಹಣದ ಅವಶ್ಯಕತೆ ಇದ್ದು, ಇದನ್ನು ಬರಿಸುವ ಶಕ್ತಿ ಮನೆಯವರಿಗೆ ಇಲ್ಲ. ಮಂಜುನಾಥ್ ಅವರ ಪೋಷಕರು ಈಗ ಸಹಾಯ ಹಸ್ತದ ನಿರೀಕ್ಷೆಯಲ್ಲಿದ್ದಾರೆ.
PublicNext
03/02/2021 08:00 am