ಕೋಲ್ಕತ್ತಾ: ಪ್ರೀತಿಸಲು ವಯಸ್ಸು ಬೇಕಾಗಿಲ್ಲ. ಪ್ರೀತಿಸುವವರ ನಡುವೆ ವಯಸ್ಸಿನ ಅಂತರವೂ ಪ್ರಶ್ನೆಯಾಗಲ್ಲ. ಪ್ರೀತಿಗೆ ಮುಪ್ಪು, ಹರೆಯ, ಎಂಬುದಿಲ್ಲ. ಈ ಎಲ್ಲ ಮಾತುಗಳನ್ನು ನಮ್ಮ ಜೀವನ ಶೈಲಿ ಸಾಬೀತು ಮಾಡಿದೆ.
ಎಲ್ಲರ ಕೈಗೆ ಇಂಟರ್ ನೆಟ್ ಬಂದಾಗಿನಿಂದ ಇಂತಹ ಅಪರೂಪದ, ಸೋಜಿಗವೆನಿಸುವ ಅನೇಕ ವಿಡಿಯೋಗಳು ಕಾಣಿಸಿಕೊಂಡು ಬೇಸತ್ತ ಮನಸಿಗೆ ಮುದ ನೀಡುತ್ತವೆ. ಚಿಂತೆಯ ಗೆರೆಗಳಿಗೆ ತೆರೆ ಎಳೆಯುತ್ತವೆ. ಮುಪ್ಪು ಬಂದರೇನು? ಜೋಡಿಯಾಗಿ ಅದೆಷ್ಟು ವರ್ಷವಾದರೇನು? ನಮ್ಮ ಅನ್ಯೋನ್ಯತಾ ಭಾವಕ್ಕೆ ಧಕ್ಕೆಯಿಲ್ಲ ಎಂಬಂತೆ ಈ ವೃದ್ಧ ದಂಪತಿ ಪಾರ್ಟಿ ಡ್ಯಾನ್ಸ್ ಮಾಡುತ್ತಿದ್ದಾರೆ. ಈ ಮೂಲಕ ವಯಸ್ಸು ದೇಹಕ್ಕಾಗಿದೆ ಮನಸಿಗಲ್ಲ ಎಂಬುದನ್ನ ಸಾಬೀತು ಮಾಡಿದ್ದಾರೆ. ದಿನಬೆಳಗಾದರೆ ಮುನಿಸಿಕೊಳ್ಳುವ ದಂಪತಿಗಳಿಗೆ ಮಾದರಿಯಾಗಿದ್ದಾರೆ.
PublicNext
30/01/2021 10:30 pm