ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಸ್ತ್ ಐಡಿಯಾ ಸರ್‌ ಜಿ..!

ವ್ಯಾಪಾರ ಮಾಡಬೇಕು ಎನ್ನುವ ಯೋಚನೆಗೆ ಮೊದಲು ಎದುರಾಗುವ ಪ್ರಶ್ನೆ ಬಂಡವಾಳ. ಹೌದು ಅಲ್ವಾ.. ಈ ಪ್ರಶ್ನೆ ನಿಮಗೂ ಎದುರಾಗಿರಬಹುದು. ಅದರಲ್ಲೂ ಮಹಾ ನಗರಗಳಲ್ಲಿ ಬಾಡಿಗೆ ಅಂಗಡಿಗಳಲ್ಲಿ ವ್ಯಾಪಾರ ಆರಂಭಿಸುತ್ತೇವೆ ಅಂದ್ರೆ ಲಕ್ಷ ಲಕ್ಷ ಬಂಡವಾಳ ಬೇಕೆ ಬೇಕು. ಆದರೆ ಅಂತಹ ಮಹಾನಗರದಲ್ಲೇ ಕಡಿಮೆ ಬಂಡವಾಳದಲ್ಲಿ ಅನೇಕರು ವ್ಯಾಪಾರ ಆರಂಭಿಸಿ ಸೈ ಎನಿಸಿಕೊಂಡ ಬಗ್ಗೆ ಕೇಳಿದ್ದೇವೆ, ನೋಡಿದ್ದೇವೆ. ಇದಕ್ಕೆ ನಿದರ್ಶನ ಎಂಬಂತ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಮುಂಬೈನ ಪಶ್ಚಿಮ ಮಲಾಡ್‌ನ ಎನ್.ಎಲ್ ಕಾಲೇಜ್ ಬಳಿಯ ಪ್ರದೇಶದಲ್ಲಿ ವ್ಯಕ್ತಿಯೊಬ್ಬರು ಸೈಕಲ್ ಮೇಲೆಯೇ ದೋಸೆ ಅಂಗಡಿ ನಡೆಸುತ್ತಿದ್ದಾರೆ. ಸಾದಾ ದೋಸೆ, ಮಸಲಾ ದೋಸೆ, ಪೀಜಾ ದೋಸೆಗಳನ್ನು ಸ್ಥಳದಲ್ಲೇ ತಯಾರಿಸುತ್ತಾರೆ. ಅವರು ಕಳೆದ ೨೫ ವರ್ಷಗಳಿಂದ ಸೈಕಲ್ ಮೇಲೆಯೇ ವ್ಯಾಪಾರ ಮಾಡುತ್ತಿದ್ದಾರೆ. ಈ ಮಸ್ತ್‌ ಐಡಿಯಾ ಕಂಡು ನೆಟ್ಟಿಗರು ಫುಲ್ ಫಿದಾ ಆಗಿದ್ದು, ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Edited By : Nagesh Gaonkar
PublicNext

PublicNext

18/01/2021 04:46 pm

Cinque Terre

110.43 K

Cinque Terre

10