ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಳಗಾವಿ: 80ಕೆಜಿ ಕಬ್ಬು ಹೊತ್ತು 3 ಕಿಮೀ ನಡೆದ: ಭಲೇ ಬಾಹುಬಲಿ ಎಂದ ಜನ

ಬೆಳಗಾವಿ: ಉತ್ತರ ಕರ್ನಾಟಕದ ಮಂದಿ ಸವಾಲ್ ಸ್ವೀಕರಿಸಿ ಸೋತ ಉದಾಹರಣೆಯೇ ಇಲ್ಲ. ಇಲ್ಲೊಬ್ಬ ಯುವಕ "ನನಗೆ ಸವಾಲು ಹಾಕುತ್ತಾರಾ..?" ಅನ್ನುತ್ತಾ 80 ಕೆಜಿ ತೂಕದ ಕಬ್ಬಿನ ಹೊರೆಯನ್ನು ಹೆಗಲ ಮೇಲೆ ಹೊತ್ತು 3 ಕಿಲೋಮೀಟರ್ ದೂರ ನಡೆದುಕೊಂಡು ಸಾಹಸ ಮೆರೆದಿದ್ದಾರೆ.

ಸದ್ಯ ಅಥಣಿ ಭಾಗದಲ್ಲಿ ಕಬ್ಬು ಕಟಾವು ಹಂಗಾಮು ಆಗಿರೋದ್ರಿಂದ ಹತ್ತು ಹದಿನೈದು ಜನರು ಒಗ್ಗಟ್ಟಾಗಿ ಕಬ್ಬಿನ ತೋಟದಲ್ಲಿ ಕೆಲಸ ಮಾಡುತ್ತಾರೆ, ಬಿಡುವಿನ ವೇಳೆಯಲ್ಲಿ ಒಬ್ಬೊಬ್ಬರು ಸವಾಲು ಹಾಕುತ್ತಾ ಸಾಹಸದ ಸವಾಲು ಎಸಗುತ್ತಾರೆ.

ಅದೇ ರೀತಿ ಮಹೇಶ್ ಗಸ್ತಿ ಎನ್ನುವವರಿಗೆ 3 ಕಿಲೋಮೀಟರ್ ದೂರದ ಮಡ್ಡಿ ಪೀರ್ ದರ್ಗಾದ ವರೆಗೆ 80 ಕೆಜಿ ತೂಕದ ಕಬ್ಬನ್ನು ಹೊತ್ತುಕೊಂಡು ಹೋದ್ರೆ ಐದು ಸಾವಿರ ರೂಪಾಯಿ ಕೊಡುತ್ತೇನೆ ಎಂದು ಒಬ್ಬರು ಸವಾಲು ಹಾಕಿದ್ದಾರೆ. ಸವಾಲನ್ನು ಸ್ವೀಕರಿಸಿದ ಮಹೇಶ್​ 80 ಕೆಜಿ ತೂಕದ ಕಬ್ಬು ಹೊತ್ತು ಸಾಗಿ ಗುರಿ ಮುಟ್ಟಿದ್ದಾರೆ.

ಒಟ್ಟಾರೆ ಆಧುನಿಕ ಯುಗದಲ್ಲಿ ಕಲ್ಲು ಎತ್ತುವುದು, ಕುಸ್ತಿ, ಭಾರವಾದ ವಸ್ತುಗಳನ್ನು ಎತ್ತುವುದು, ಅಪರೂಪ ಎನಿಸಿದರೂ ಗ್ರಾಮೀಣ ಭಾಗಗಳಲ್ಲಿ ಇನ್ನೂ ಈ ರೀತಿಯ ಆಚರಣೆಗಳು ಉಳಿದಿರುವುದು ಹೆಮ್ಮೆ ಪಡುವ ವಿಷಯವಾಗಿದೆ. ಗ್ರಾಮೀಣ ಪ್ರದೇಶದ ಈ ಯುವಕನ ಸಾಧನೆ ಸದ್ಯ ಪ್ರಶಂಸೆಗೆ ಕಾರಣವಾಗಿದೆ.

Edited By : Nagesh Gaonkar
PublicNext

PublicNext

02/01/2021 08:49 pm

Cinque Terre

91.1 K

Cinque Terre

25