ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಪ್ರಧಾನಿ ನರೇಂದ್ರ ಮೋದಿಯವರಿಂದ ಕುಂದಾಪುರದ ನವಜೋಡಿಗೆ ಶ್ಲಾಘನೆ

ಉಡುಪಿ: ಪ್ರಧಾನಿ ಮೋದಿಯವರ ಮನ್ ಕಿ ಬಾತ್ ನಲ್ಲಿ ಕುಂದಾಪುರದ ನವಜೋಡಿಗೆ ಶ್ಲಾಘನೆ ವ್ಯಕ್ತವಾಗಿದೆ.

ಅನುದೀಪ್ ಹೆಗ್ಡೆ, ವಿನುಷಾ ಹೆಸರು ಪ್ರಧಾನಿ ನರೇಂದ್ರ ಮೋದಿಯವರ ಮನ್ ಕೀ ಬಾತ್ ನಲ್ಲಿ ಪ್ರಸ್ತಾಪವಾಗಿದೆ. ಬೈಂದೂರು ಮೂಲದ

ನವ ಜೋಡಿ ಅನುದೀಪ್ ಹೆಗ್ಡೆ ಮತ್ತು ವಿನುಷಾ ಇವರು ಮದುವೆಯ ಬಳಿಕ ಹನಿಮೂನ್ ಗೆ ತೆರಳದೆ ಸೋಮೇಶ್ವರ ಕ್ಲನಿಂಗ್ ನಡೆಸಿದ್ದ ಜೋಡಿ ಇಡೀ ನವ ಯುವಕರನ್ನು ಒಮ್ಮೆ ಇವರತ್ತ ತಿರುಗಿ ನೋಡೋ ಹಾಗೆ ಮಾಡಿದೆ.

ನವೆಂಬರ್ 27 ರಿಂದ ಡಿಸೆಂಬರ್ 7 ರವರೆಗೆ ಸಮುದ್ರ ತೀರ ಕ್ಲಿನಿಂಗ್ ಮಾಡಿದ್ದ ಜೋಡಿಗೆ ರಾಜ್ಯದಲ್ಲೆಡೆ ಶಭಾಸ್ ಗಿರಿ ವ್ಯಕ್ತವಾಗಿತ್ತು.

ಮಾಧ್ಯಮ ಮತ್ತು ಸಾಮಾಜಿಕ ಜಾಲತಾಣದಲ್ಲಿ ಹೊಸ ದಂಪತಿಗಳ ಕಾರ್ಯಕ್ಕೆ ಶ್ಲಾಘನೆ ವ್ಯಕ್ತವಾಗಿತ್ತು ಈ ಬಗ್ಗೆ ಮಾಹಿತಿ ಕಲೆ ಹಾಕಿದ ಪ್ರಧಾನಿ ನರೇಂದ್ರ ಮೋದಿಯವರು ನವದಂಪತಿಯನ್ನು ಶ್ಲಾಘಿಸಿದರು.

ಈ ನವ ವಧುವರರು ಯುವ ಪೀಳಿಗೆಗೆ ದಾರಿ ದೀಪ ಎಂದು ಹೊಗಳಿದ್ದ ಪ್ರಧಾನಿ ಮೋದಿ ದೇಶದಲ್ಲೆಡೆ ನವದಂಪತಿಗಳ ಕೆಲಸ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

Edited By : Manjunath H D
PublicNext

PublicNext

27/12/2020 05:09 pm

Cinque Terre

119.45 K

Cinque Terre

6

ಸಂಬಂಧಿತ ಸುದ್ದಿ