ಡಬ್ಲ್ಯೂಡಬ್ಲ್ಯೂಇನಲ್ಲಿ ಲ್ಯೂಕ್ ಹಾರ್ಪರ್ ಮತ್ತು ಆಲ್ ಎಲೈಟ್ ವ್ರೆಸ್ಲಿಂಗ್ ನಲ್ಲಿ ಬ್ರಾಡೀ ಲೀ ಎಂದು ಜನಪ್ರಿಯವಾಗಿದ್ದ ಜಾನ್ ಹ್ಯೂಬರ್(41) ಶ್ವಾಸಕೋಶದ ಸಮಸ್ಯೆಯಿಂದಾಗಿ ಭಾನುವಾರ ನಿಧನರಾದರು.
ಪ್ರಾರಂಭದಲ್ಲಿ ಡ್ರ್ಯಾಗನ್ ಗೇಟ್ ಮತ್ತು ಕಾಂಬಾಟ್ ಝೋನ್ ವ್ರೆಸ್ಲಿಂಗ್‌ನಂತಹ ಪ್ರಚಾರಗಳ ಮೂಲಕ ಹ್ಯೂಬರ್ ಕುಸ್ತಿ ಅಖಾಡಕ್ಕೆ ಪ್ರವೇಶಿಸಿದರು. ಅವರು ಅಂತಿಮವಾಗಿ NXT ಮತ್ತು WWE ನಲ್ಲಿ ದೊಡ್ಡ ಸಾಧನೆಗೆ ಮುಂದಾದರು.
ಮೃತ ಜಾನ್ ಹ್ಯೂಬರ್ ಪತ್ನಿ ಅಮಾಂಡಾ ತನ್ನ ಪತಿಯನ್ನು ನೆನೆದು , "ನನ್ನ ಉತ್ತಮ ಸ್ನೇಹಿತ ಇಂದು ನಿಧನರಾದರು. ನಾನು ಈ ಪದಗಳನ್ನು ಬರೆಯಲು ಎಂದಿಗೂ ಬಯಸಿರಲಿಲ್ಲ ಮನಸ್ಸು ಛಿದ್ರವಾಗಿದೆ.ಜಗತ್ತು ಅವನನ್ನು ಅದ್ಭುತ ಬ್ರಾಡೇ ಲೀ ಎಂದು ನೋಡಿದೆ ಆದರೆ ಅವನು ನನ್ನ ಅತ್ಯುತ್ತಮ ಸ್ನೇಹಿತ, ನನ್ನ ಪತಿ ಮತ್ತು ಒಬ್ಬ ಶ್ರೇಷ್ಠ ತಂದೆ. ' ಎಂದು ಇನ್ಸ್ಟಾಗ್ರಾಂ ನಲ್ಲಿ ಬರೆದಿದ್ದಾರೆ,
"ಯಾವುದೇ ಪದಗಳು ನನ್ನ ಪ್ರೀತಿಯನ್ನು ವ್ಯಕ್ತಪಡಿಸಲು ಸಾಧ್ಯವಿಲ್ಲ ಅಥವಾ ನಾನು ಈಗ ಎಷ್ಟು ದುಃಖಿತಳಾಗಿದ್ದೇನೆ ಎಂದು ಹೇಳಲಾಗದು. ಕೋವಿಡ್ ಅಲ್ಲದ ಶ್ವಾಸಕೋಶದಸಮಸ್ಯೆಯೊಂದಿಗೆ ಕಠಿಣ ಹೋರಾಟದ ನಂತರ ಅವರು ಪ್ರೀತಿಪಾತ್ರರಿಂದ ಅಗಲಿದ್ದಾರೆ" ಅಮಾಂಡಾ ಹೇಳಿದ್ದಾರೆ.
ದಿ ವ್ಯಾಟ್ ಫ್ಯಾಮಿಲಿಯ ಸದಸ್ಯರಾಗಿ, ಹ್ಯೂಬರ್ ಕೇನ್, ಡೇನಿಯಲ್ ಬ್ರಿಯಾನ್, ದಿ ಶೀಲ್ಡ್, ಜಾನ್ ಸೀನಾಮತ್ತು WWE ನಲ್ಲಿ ದಿ ಯುಸೋಸ್ ಅವರೊಂದಿಗೆ ಪೈಪೋಟಿಗೆ ಒಡ್ಡಿಕೊಂಡಿದ್ದರು.ಅವರು ಎರಡು ಬಾರಿ ಟ್ಯಾಗ್ ಟೀಮ್ ಪ್ರಶಸ್ತಿಗಳನ್ನು ಗೆದ್ದದ್ದು ಇಂಟರ್ ಕಾಂಟಿನೆಂಟಲ್ ಚಾಂಪಿಯನ್‌ಶಿಪ್ ಸಹ ಮುಡಿಗೇರಿಸಿಕೊಂಡಿದ್ದರು.. AEW ಗೆ ಸೇರಿದ ನಂತರ, ಅವರು AEW TNT ಚಾಂಪಿಯನ್‌ಶಿಪ್ ಸಹ ಗೆದ್ದು ಸಾಧನೆ ಮೆರೆದಿದ್ದರು.
PublicNext
27/12/2020 12:58 pm