ಮಲಪ್ಪುರಂ: ಹುಟ್ಟುತ್ತ ಅಣ್ಣ-ತಮ್ಮಂದಿರು ಬೆಳೆಯುತ್ತ ದಾಯಾದಿಗಳು ಎಂಬ ಮಾತಿದೆ. ಬಹುತೇಕ ಸಹೋದರರು ಕೂಡಿ ಬಾಳದೇ ಪರಸ್ಪರ ದ್ವೇಷಿಗಳಂತೆ ವರ್ತಿಸುತ್ತಿರುತ್ತಾರೆ. ಅಂಥವರ ನಡುವೆ ಈ ಸಹೋದರರು ಅಪವಾದ. ಅದಕ್ಕೆ ಈ ದೃಶ್ಯವೇ ಸಾಕ್ಷಿ. ಕೇರಳದ ಮಲಪ್ಪುರಂನ ಮನೆಯೊಂದರ ಹೊರಗಿನ ಸಿಸಿಟಿವಿ ವೀಡಿಯೋದಲ್ಲಿ ವ್ಯಕ್ತಿಯೊಬ್ಬ ತನ್ನ ಕಿರಿಯ ಸಹೋದರನನ್ನ ಟೆರೇಸ್‌ನಿಂದ ಕೆಳಗೆ ಬೀಳುತ್ತಿದ್ದಂತೆ ರಕ್ಷಿಸಿರುವುದು ಸೆರೆಯಾಗಿದೆ.
ಯುವಕ ಮನೆಯ ತಾರಸಿಯನ್ನು ಸ್ವಚ್ಛಗೊಳಿಸುತ್ತಿದ್ದಾಗ ಆತನ ಹಿರಿಯ ಸಹೋದರ ಕೆಳಗಿನಿಂದ ಟೆರೇಸ್ ಮೇಲಿನ ಕೊಳವೆಯಿಂದ ನೀರನ್ನ ಸಿಂಪಡಿಸುತ್ತಿದ್ದ. ಆಗ ಕೆಳಗಿದ್ದ ಅಣ್ಣ ಮೇಲೆ ಪೈಪ್ ಎಸೆದಿದ್ದು, ಅದನ್ನ ಹಿಡಿಯಲು ಹೋದ ತಮ್ಮ ಕಾಲು ಜಾರಿದ್ದಾನೆ. ಆಗ ಅಣ್ಣ ತನ್ನ ಪ್ರಾಣ ಪಣಕ್ಕಿಟ್ಟು ಸಹೋದರನನ್ನ ಕಾಪಾಡಿದ್ದಾನೆ. ನಂತರ ಅವರಿಬ್ಬರೂ ನೆಲದ ಮೇಲೆ ಬೀಳುತ್ತಾನೆ. ಆದ್ರೆ, ದೃಶ್ಯದಲ್ಲಿ ತಮ್ಮನನ್ನ ಹಿಡಿಯುವಾಗ ಅಣ್ಣನ ತಲೆಗೆ ಏಟು ಬಿದ್ದಂತೆ ಕಾಣುತ್ತೆ. ಆಗ ಒಡಹುಟ್ಟಿದವ ಚೆನ್ನಾಗಿದ್ದಾನೆಯೇ? ಎಂದು ಪರಿಶೀಲಿಸುವುದನ್ನ ಕಾಣಬಹುದು. ವರದಿಗಳ ಪ್ರಕಾರ, ಘಟನೆಯಲ್ಲಿ ಇಬ್ಬರಲ್ಲಿ ಯಾರೊಬ್ಬರೂ ಗಾಯಗೊಂಡಿಲ್ಲ.
PublicNext
04/08/2022 08:59 pm