ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವಿಡಿಯೊ: ಏರ್‌ಪೋರ್ಟ್‌ನಲ್ಲಿ ಮಗನಿಗೆ ಚಪ್ಪಲಿಯಿಂದ ಹೊಡೆದಳು ಅಮ್ಮ: ಕಾರಣವೇನು ಗೊತ್ತಾ?

ಮನುಷ್ಯರಲ್ಲಿ ಅಷ್ಟೇ ಅಲ್ಲ. ಪ್ರಾಣಿ-ಪಕ್ಷಿಗಳಲ್ಲೂ ಕೂಡ ತಾಯಿ-ಮಕ್ಕಳ ಗಾಢ ಸಂಬಂಧ ಇರುತ್ತೆ. ಆ ಪ್ರೀತಿ ಕೆಲವೊಮ್ಮೆ ಎಕ್ಸ್ಟ್ರಾ ಆಗಿಬಿಟ್ಟರೆ‌ ಏನಾಗುತ್ತೆ ಎಂಬುದಕ್ಕೆ ಇಲ್ಲಿ ವಿಡಿಯೋ ಸಮೇತ ಸಾಕ್ಷಿ ಇದೆ ನೋಡಿ.

ಏರ್‌ಪೋರ್ಟ್‌ನಲ್ಲಿ ಬಂದ ತಾಯಿಯನ್ನು ಸ್ವಾಗತಿಸಲು ಮಗ ಅದಾಗಲೇ ಬಂದು ನಿಂತಿದ್ದಾನೆ. 'We missed you' ಎಂದು ಬರೆದಿದ್ದ ಫಲಕದೊಂದಿಗೆ ಬಂದಿದ್ದ ಮಗನನ್ನು ಕಂಡ ಕೂಡಲೇ ಆ ತಾಯಿ ತನ್ನ ಚಪ್ಪಲಿಯನ್ನು ಕೈಗೆತ್ತಿಕೊಂಡಿದ್ದಾಳೆ. ನಂತರ ಮಗನ ಬಳಿ ಬಂದು ಸರಿಯಾಗಿ ನಾಲ್ಕು ಬಾರಿಸಿದ್ದಾಳೆ. ಈ ವೇಳೆ ಆತ ಬಿಡಿಸಿಕೊಳ್ಳಲು ದೂರ ಓಡಿದಾಗಲೂ ಬಿಡದ ಆ ತಾಯಿ ಚಪ್ಪಲಿಯನ್ನು ಮಗನ ಮೇಲೆ ಎಸೆದಿದ್ದಾಳೆ.

ಅಂದ್ ಹಾಗೆ ಆ ತಾಯಿ ಎಲ್ಲರ ಮುಂದೆ ಹೀಗೆ ನಡೆದುಕೊಂಡಿದ್ದು ಮಗನ ಮೇಲಿನ ಪ್ರೀತಿಗಾಗಿ. ಪ್ಯಾಲೆಸ್ತೀನ್-ಪಾಕಿಸ್ತಾನ್ ಮೂಲದ ಕಲಾವಿದ ಅನ್ವರ್ ಜಿಬಾವಿ ಅವರು ಈ ವಿಡಿಯೋವನ್ನು ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋ ನೋಡಿದ ಜನ ಅದರ ಅಸಲಿಯತ್ತು ಏನೆಂಬುದು ಗೊತ್ತಾದ ಮೇಲೆ ಬಿದ್ದು ಬಿದ್ದು ನಕ್ಕಿದ್ದಾರೆ.

Edited By : Nagesh Gaonkar
PublicNext

PublicNext

05/12/2021 05:54 pm

Cinque Terre

69.46 K

Cinque Terre

5