ಉತ್ತರ ಪ್ರದೇಶ: ಸರ್ಕಾರಿ ಕಚೇರಿಗೆ ಕಪ್ಪು ಮೇಕೆಯೊಂದು ನುಗ್ಗಿ ಅಲ್ಲಿದ್ದ ಫೈಲ್‌ವೊಂದನ್ನ ಬಾಯಲ್ಲಿ ಕಚ್ಚಿಕೊಂಡು ಕಚೇರಿಯ ಆವರಣದ ತುಂಬಾ ಓಡಾಡಿದ ಘಟನೆ ಇಲ್ಲಿಯ ಕಾನ್ಪುರದ ಚೌಬೆಪುರ ಪಂಚಾಯತ್ ಕಾರ್ಯದರ್ಶಿ ಕಚೇರಿಯಲ್ಲಿ ನಡೆದಿದೆ.
ಕಚೇರಿಯ ಕೋಣೆಯೊಳಗೆ ನುಗ್ಗಿದ ಮೇಕೆ ಅಲ್ಲಿದ್ದ ಫೈಲ್ ಅನ್ನ ಕಚ್ಚಿಕೊಂಡು ಹೊರಗೆ ಬಂದಿದೆ. ಇದನ್ನ ಕಂಡ ಕಚೇರಿಯ ಸಿಬ್ಬಂದಿ ಅದರ ಹಿಂದೆನೆ ಓಡಿದ್ದಾನೆ. ಫೈಲ್ ಬಾಯಲ್ಲಿ ಹಿಡಿದ ಮೇಕೆ ಮುಂದೆ ಮುಂದೆ ಓಡಿದರೇ, ಕಚೇರಿಯ ಸಿಬ್ಬಂದಿ ಹಿಂದೆ ಹಿಂದೆ ಓಡ್ತಿದ್ದಾನೆ. 22 ಸೆಕೆಂಡ್‌ನ ಈ ವೀಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ.
PublicNext
04/12/2021 07:03 pm