ತಿರುಪತಿ: ಚೆನ್ನೈ ಮೂಲದ ಉದ್ಯಮಿ ಅಬ್ದುಲ್ ಘನಿ ಎಂಬುವರು ತಿರುಪತಿ ತಿರುಮಲ ದೇವಸ್ಥಾನಕ್ಕೆ ಮಂಗಳವಾರ ₹1.02 ಕೋಟಿ ದೇಣಿಗೆ ನೀಡಿದ್ದಾರೆ.
ವೆಂಕಟೇಶ್ವರನ ಭಕ್ತರಾಗಿರುವ ಅಬ್ದುಲ್ ಘನಿ ಅವರು ದೇವಾಲಯದ ಆವರಣದಲ್ಲಿ ನಿರ್ಮಿಸಿದ ಶ್ರೀ ಪದ್ಮಾವತಿ ವಿಶ್ರಾಂತಿ ಗೃಹಕ್ಕೆ ಪೀಠೋಪಕರಣ ಹಾಗೂ ಪಾತ್ರೆಗಳನ್ನು ಖರೀದಿಸಲು ₹87 ಲಕ್ಷ ಹಾಗೂ ಎಸ್.ವಿ ಅನ್ನಪ್ರಸಾದಂ ಟ್ರಸ್ಟ್‌ಗೆ ₹15 ಲಕ್ಷವನ್ನು ದೇಣಿಗೆಯಾಗಿ ನೀಡಿದ್ದಾರೆ.
ಪತ್ನಿ ಸಬೀನಾ ಬಾನು ಹಾಗೂ ಮಕ್ಕಳೊಂದಿಗೆ ಆಗಮಿಸಿದ ಅಬ್ದುಲ್ ಘನಿ ದೇಣಿಗೆ ನೀಡಿದ್ದಾರೆ. ವೆಂಕಟೇಶ್ವರ, ಅಲ್ಲಾ, ಯೇಸು ಎಲ್ಲರೂ ಒಂದೇ ಎಂಬುದು ನನ್ನ ನಂಬಿಕೆ. ನಾನು ಸುಮಾರು 25 ವರ್ಷಗಳಿಂದ ದೇವಸ್ಥಾನಕ್ಕೆ ಭೇಟಿ ನೀಡುತ್ತಲಿದ್ದೇನೆ ಎಂದು ಉದ್ಯಮಿ ಅಬ್ದುಲ್ ಘನಿ ತಿಳಿಸಿದ್ದಾರೆ.
PublicNext
21/09/2022 03:44 pm