ಜೈಪುರ: ರಾಜಸ್ಥಾನದ ಉದಯಪುರದಲ್ಲಿ ಕೊಲೆಗೀಡಾದ ಟೈಲರ್ ಕನ್ಹಯ್ಯಾ ಲಾಲ್ ಅವರ ಅಂಗಡಿಯ ಬಳಿಯೇ ಮೊಹರಂ ಮೆರವಣಿಗೆಯ ವೇಳೆ 'ತಾಜಿಯಾ' ಮೇಲೆ ಬೆಂಕಿ ಕಾಣಿಸಿಕೊಂಡಿದೆ. ಇದನ್ನು ಗಮನಿಸಿದ ಹಿಂದೂ ಕುಟುಂಬವು ಅನಾಹುತ ತಪ್ಪಿಸಿದೆ.
ನಂತರ ಉದಯಪುರದ ಹಿಂದೂ ಕುಟುಂಬವು ದುರಂತವನ್ನು ತಪ್ಪಿಸಲು ಸಹಾಯ ಮಾಡಿದೆ. ಆಶಿಶ್ ಚೋವಾಡಿಯಾ, ರಾಜ್ಕುಮಾರ್ ಸೋಲಂಕಿ ಮತ್ತು ಅವರ ಕುಟುಂಬ ಸದಸ್ಯರು ಬೆಂಕಿಯನ್ನು ನಂದಿಸುವವರೆಗೂ ತಮ್ಮ ಬಾಲ್ಕನಿಗಳಿಂದ 'ತಾಜಿಯಾ' ಮೇಲೆ ನೀರು ಸುರಿದರು ಎಂದು ಪೊಲೀಸರು ತಿಳಿಸಿದ್ದಾರೆ. ಈ ಘಟನೆ ಎಲ್ಲರ ಮನ ಗೆದ್ದಿದೆ ಎಂದು ಜಿಲ್ಲಾಧಿಕಾರಿ ತಾರಾ ಚಂದ್ ಮೀನಾ ತಿಳಿಸಿದ್ದಾರೆ.
PublicNext
11/08/2022 03:59 pm