ರಾಯಚೂರು: ಕರ್ನಾಟಕಕ್ಕೆ ಬೆಲ್ಜಿಯಂನಿಂದ ಕೋಟಿ ರೂ ಮೌಲ್ಯದ ಸ್ಪಟಿಕ ಲಿಂಗ ಬಂದಿದೆ. ಈಗಾಗಲೇ ಇದರ ಪ್ರತಿಷ್ಠಾಪನೆ ಕೂಡ ಆಗಿದೆ. ವಿಶೇಷ ಅಂದ್ರೆ, ಈ ಸ್ಪಟಿಕ ಲಿಂಗ ಪ್ರತಿಷ್ಠಾಪನೆಗೆ ಮಾಜಿ ಪ್ರಧಾನಿ ದೇವೇಗೌಡ ಹಾಗೂ ಮಾಜಿ ಸಚಿವ ಜನಾರ್ದನ್ ರೆಡ್ಡಿ ಸಾಕ್ಷಿ ಆಗಿದ್ದಾರೆ.
ಕೋಟಿ ಬೆಲೆ ಬಾಳುವ ಈ ಸ್ಪಟಿಕ ಲಿಂಗ ರಾಯಚೂರಿನ ಜಿಲ್ಲೆಯಲ್ಲಿಯೇ ಇದೆ. ಇಲ್ಲಿ ಸಿಂಧನೂರು ತಾಲೂಕಿನ ಗಾಂಧಿನಗರದಲ್ಲಿರೋ ವಿಶ್ವೇಶ್ವರ ಪಂಚಾಯತ್ ಕ್ಷೇತ್ರದಲ್ಲಿರೋ ಶಿವನ ವಿಶೇಷ ದೇವಸ್ಥಾನದ ಗರ್ಭಗುಡಿಯಲ್ಲಿಯೇ ಈ ಸ್ಪಟಿಕ ಲಿಂಗವನ್ನ ಪ್ರತಿಷ್ಠಾಪಿಸಲಾಗಿದೆ. ವಿಶೇಷವೆಂದರೆ, ಶಿವನ ವಿವಿಧ ಅವತಾರಗಳಿರೋ ದೇವಸ್ಥಾನದಲ್ಲಿಯೇ ಈ ಒಂದು ಸ್ಪಟಿಕ ಇದೆ.
ಆದರೆ, ಇದರ ಭಕ್ತರಿಗೆ ಇದರ ದರುಶನ ವರ್ಷಕ್ಕೆ ಎರಡೇ ಸಲ ಆಗುತ್ತದೆ. ಕಾರ್ತಿಕ ಮಾಸ ಹಾಗೂ ಶಿವರಾತ್ರಿ ದಿನವೇ ಈ ಸ್ಪಟಿಕ ಲಿಂಗದ ದರುಶನವನ್ನ ಭಕ್ತರು ಮಾಡಬಹುದು. ಇನ್ನೂ ಒಂದು ವಿಶೇಷವೇನೆಂದ್ರೆ, ಸ್ಪಟಿಕ ಇರೋ ಹಾಗೂ ಶಿವನ ವಿವಿಧ ಅವತಾರಗಳ ದೇವಸ್ಥಾನ ಇದಾಗಿದ್ದು, ದೇಶದಲ್ಲಿಯೇ ಈ ರೀತಿಯ ದೇವಸ್ಥಾನ ಮೊಟ್ಟ ಮೊದಲು ಅನ್ನೋ ಹೆಗ್ಗಳಿಕೆಗೂ ಈ ದೇವಸ್ಥಾನ ಪಾತ್ರವಾಗಿದೆ.
PublicNext
09/05/2022 06:01 pm