ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಗನಿಗೆ ರಾತ್ರಿ ನಿದ್ದೆ ಬರುವಂತೆ ಮಾಡಪ್ಪ ತಂದೆ: ದೇವರಿಗೆ ಹೀಗೊಂದು ಪತ್ರ

ಚಿಕ್ಕಮಗಳೂರು: ಭಕ್ತರು ಇತ್ತೀಚಿಗೆ ಕಾಣಿಕೆ ಹುಂಡಿಗಳಲ್ಲಿ ಚಿತ್ರ ವಿಚಿತ್ರವಾದ ಬೇಡಿಕೆಗಳನ್ನು ಹೊತ್ತ ಕಾಗದದ ಪತ್ರಗಳನ್ನು ಹಾಕಿ ಮನವಿ ಮಾಡಿಕೊಳ್ಳುವುದು ಹೆಚ್ಚಾಗುತ್ತಿದೆ. ಈ ನಡುವೆ ಚಿಕ್ಕಮಗಳೂರಿನಲ್ಲಿ ಭಕ್ತರೊಬ್ಬರು ಕಾಣಿಕೆ ಹುಂಡಿಯಲ್ಲಿ ಹಾಕಿರುವ ಬೇಡಿಕೆ ಪತ್ರ ಎಲ್ಲರ ಹುಬ್ಬೇರಿಸುವಂತೆ ಮಾಡಿದೆ.

ಹೌದು, ಜಿಲ್ಲೆಯ ಕಳಸದಲ್ಲಿರುವ ಕಳಸೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಪರಿವಾರ ದೇವರುಗಳ ಕಾಣಿಕೆ ಹುಂಡಿ ಎಣಿಕೆ ಕಾರ್ಯ ನಡೆಯಿ ಈ ವೇಳೆಯಲ್ಲಿ, ಮಗನ ಇಡೀ ಬದುಕನ್ನೇ ಬದಲಿಸಪ್ಪಾ ಎಂದು ಪತ್ರ ಬರೆದು ಕಾಣಿಕೆ ಹುಂಡಿಗೆ ಹಾಕಿರುವ ಪತ್ರ ವೈರಲ್‌ ಆಗಿದೆ.

ಈತನಿಗೆ ಬೇಗ ಕೆಲಸ ಸಿಗುವಂತೆ ಮಾಡು ತಂದೆ, ಆತನ ನೆಚ್ಚಿನ ಕೆಲಸ ಸಿಗಲಿ, ಮತ್ತು ಆತನ ಕುಡಿತದ ಚಟ ಬಿಡಿಸು, ಅದರ ಮೇಲೆ ಮನಸ್ಸು ಬರದಂತೆ ಮಾಡು ತಂದೆ. ಕೋಪ ಹೋಗಲಾಡಿಸು, ಚಂಚಲ ಸ್ವಭಾವ ಹೋಗಲಾಡಿಸು. ರಾತ್ರಿ ಹೊತ್ತು ನಿದ್ದೆ ಬರುವಂತೆ ಮಾಡು, ಭಯ ನಿವಾರಣೆ ಮಾಡಪ್ಪ, ಅವನ ಮನಸ್ಸಿಗೆ ಸುಖ, ಶಾಂತಿ ನೆಮ್ಮದಿ ನೀಡಪ್ಪ. ಸಂಸಾರದಲ್ಲಿ ಜವಾಬ್ದಾರಿ ಕೊಡಪ್ಪ, ಹೆಂಡತಿ ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳುವಂತೆ ಮಾಡು,ಹೀಗೆ ತನ್ನ ಕೌಟಂಬಿಕ ಸಮಸ್ಯೆಗಳನ್ನು ಬರೆದು ಹುಂಡಿಗೆ ಹಾಕಿ ದೇವರಿಗೆ ಮನವಿ ಸಲ್ಲಿಸಿದ್ದಾರೆ ಭಕ್ತರೊಬ್ಬರು.

Edited By : Nagaraj Tulugeri
PublicNext

PublicNext

01/04/2022 04:50 pm

Cinque Terre

22.97 K

Cinque Terre

0