ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪಂಚಮಿ ದಿನದಂದು ಇಲ್ಲಿ ನಡೆಯುತ್ತೆ ಹಾವುಗಳ ಜಾತ್ರೆ.!

ಪಾಟ್ನಾ: ಶಿವನ ಹಾರ ನಾಗರಾಜ. ಹಿಂದೂ ಸಂಪ್ರದಾಯದಲ್ಲಿ ನಾಗಪ್ಪನಿಗೆ ನಾಗರ ಪಂಚಮಿ ದಿನದಂದು ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ಈ ಹಬ್ಬವನ್ನು ಬಿಹಾರದ ಸಮಸ್ತಿಪುರದ ವಿಭೂತಿಪುರ ವ್ಯಾಪ್ತಿಯ ಸಿಂಘಿಯಾ ಘಾಟ್‌ನಲ್ಲಿ ವಿಶೇಷವಾಗಿ ಆಚರಿಸಲಾಗುತ್ತದೆ.

ಹೌದು. ಕೆಲ ಶಿವನ ನೂರಾರು ಭಕ್ತರು ಪೊದೆ, ಬೆಟ್ಟಗಳಲ್ಲಿ ಅಡಗಿರುವ ಹಾವುಗಳನ್ನು ಹೊರತೆಗೆದು ತಮ್ಮ ಕೊರಳಿಗೆ ಹಾಕಿಕೊಂಡು ಮೆರವಣಿಗೆಯಲ್ಲಿ ಭಾಗಿಯಾಗುತ್ತಾರೆ. ಹಲವು ವರ್ಷಗಳಿಂದ ಈ ಸಂಪ್ರದಾಯವು ನಡೆದು ಬಂದಿದೆ.

ಪ್ರತಿವರ್ಷವೂ ನಾಗಪಂಚಮಿಯ ಸಂದರ್ಭದಲ್ಲಿ ಸಾವಿರಾರು ಜನರು ನದಿ ತೀರದಲ್ಲಿ ವಿಷಕಾರಿ ಹಾವುಗಳನ್ನು ಹಿಡಿಯುತ್ತಾರೆ. ನಂತರ ಅವುಗಳನ್ನು ತಮ್ಮ ಕೈ ಮತ್ತು ಕುತ್ತಿಗೆಗೆ ಸುತ್ತಿಕೊಂಡು ನಾಗ ಮಂತ್ರ ಜಪಿಸುತ್ತಾ ಸಾಗುತ್ತಾರೆ. ಈ ಜಾತ್ರೆಯನ್ನು ನೋಡಲು ಸುತ್ತಮುತ್ತಲಿನ ಸಮಸ್ತಿಪುರ ಜಿಲ್ಲೆಗಳಿಂದ ಅನೇಕ ಜನರು ಇಲ್ಲಿಗೆ ಬರುತ್ತಾರೆ.

ಸ್ಥಳೀಯರು ನೀಡುವ ಮಾಹಿತಿ ಪ್ರಕಾರ, "1981ರಲ್ಲಿ ಸಿಂಘಿಯಾ ಘಾಟ್‌ನಲ್ಲಿನ ಹಳ್ಳಿಯ ಜನರು ಶಿವನ ಮೂರ್ತಿ ಸ್ಥಾಪಿಸಿದ್ದರು. ಇದರಿಂದಾಗಿ ಗ್ರಾಮದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆದಿಲ್ಲ. ಈ ಸಮಯದಲ್ಲಿಯೇ ಹಾವು ಹಿಡಿಯುವ ಸಂಪ್ರದಾಯವನ್ನು ನಾಗಪಂಚಮಿಯ ದಿನ ಆರಂಭಿಸಲಾಯಿತು. ಕ್ರಮೇಣ ಈ ಸಂಪ್ರದಾಯವು ಮುಂದುವರೆಯುತ್ತಾ ಬಂದಿದ್ದು, ಇಂದು ಸಾವಿರಾರು ಜನರು ವಿಷಪೂರಿತ ಹಾವುಗಳನ್ನು ಹಿಡಿದು ಜಾತ್ರೆಯಲ್ಲಿ ಭಾಗವಹಿಸುತ್ತಾರೆ.

ಹಾವುಗಳನ್ನು ನೀರಿನಿಂದ ಹೊರತೆಗೆಯುವ, ಅವುಗಳನ್ನು ಹೊತ್ತು ಮೆರಣಿಗೆಯಲ್ಲಿ ಭಾಗವಹಿಸುವ ಕುಶಲತೆಯನ್ನು ಪ್ರದರ್ಶಿಸುವುದರ ಹಿಂದಿನ ಸತ್ಯವೇನು ಎಂಬುದು ಇಲ್ಲಿಯವರೆಗೆ ರಹಸ್ಯವಾಗಿಯೇ ಉಳಿದಿದೆ.

Edited By : Manjunath H D
PublicNext

PublicNext

13/08/2021 05:09 pm

Cinque Terre

55.1 K

Cinque Terre

1