ಬ್ಯಾಲೆನ್ಸಿಂಗ್ ಗೇಮ್ಗಳು ಅಂತಾ ನೀವು ಗೂಗಲ್ ನಲ್ಲಿ ಸರ್ಚ್ ಕೊಟ್ಟರೆ ಸಾವಿರಾರು ವಿಡಿಯೋಗಳು ಸಿಗಬಹುದು. ಆದರೆ ಆಟಗಾರ ಆಂಡ್ರಿ ರಾಗೆಟ್ಲಿಯವರ ಈ ವಿಡಿಯೋ ನೋಡಿದ್ರೆ ನೀವು ಬೆರಗಾಗುವುದು ಗ್ಯಾರಂಟಿ.
ವ್ಯಾಯಾಮದ ಚೆಂಡು, ಹಲಗೆಯ ಮೇಲೆ ಸೈಕಲ್ ಸವಾರಿ, ಟೈರ್ನಿಂದ ಬ್ಯಾಕ್ಫ್ಲಿಪ್, ಹಗ್ಗದ ಮೇಲಿನ ನಡಿಗೆ ಸೇರಿದಂತೆ ವಿವಿಧ ಸಾಹಸಗಳನ್ನ ಪ್ರದರ್ಶಿಸಿದ್ದಾರೆ ಆಂಡ್ರಿ ರಾಗೆಟ್ಲಿ.ಮುಖಕ್ಕೆ ಮಾಸ್ಕ್ ಹಾಕಿಕೊಂಡೇ ಈ ಆಟವನ್ನ ಆಡಿನ ಆಂಡ್ರಿ ಆಟ ಮುಗಿಯೋವರೆಗೂ ಮಧ್ಯದಲ್ಲಿ ಎಲ್ಲಿಯೂ ವಿಶ್ರಾಂತಿ ಪಡೆಯೋದಿಲ್ಲ.
ಈ ವಿಡಿಯೋವನ್ನ ಪೋಸ್ಟ್ ಮಾಡಿರುವ ರಾಗೆಟ್ಲಿ 148 ಪ್ರಯತ್ನಗಳ ಬಳಿಕ ಈ ಸಾಧನೆ ಮಾಡಿದ್ದೇನೆ ಅಂತಾ ಬರೆದುಕೊಂಡಿದ್ದಾರೆ.
ಒಲಿಂಪಿಕ್ ಕೂಡ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಈ ವಿಡಿಯೋವನ್ನ ಪೋಸ್ಟ್ ಮಾಡಿದೆ.
ಈ ವಿಡಿಯೋ ಸಾಮಾನ್ಯರಿಗೆ ಅಷ್ಟೇ ಅಲ್ಲದೆ ಜಮ್ಮು ಕಾಶ್ಮೀರ ಮಾಜಿ ಮುಖ್ಯಮಂತ್ರಿ ಓಮರ್ ಅಬ್ದುಲ್ಲಾ ಕೂಡ ಈ ವಿಡಿಯೋ ಕಂಡು ಹುಬ್ಬೇರಿಸಿದ್ದಾರೆ .
PublicNext
18/11/2020 06:22 pm