ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪುತ್ತೂರು ನಗರದಲ್ಲಿ ಹುಚ್ಚು ನಾಯಿಗಳ ಹಾವಳಿ!

ಪುತ್ತೂರು: ನಗರದಾದ್ಯಂತ ಹುಚ್ಚು ನಾಯಿಗಳ ಉಪಟಳ ಆರಂಭವಾಗಿದ್ಧು, ಇಂದು ಒಂದೇ ದಿನ ಹುಚ್ಚು ನಾಯಿಗಳು 13 ಜನರಿಗೆ ಕಚ್ಚುವ ಮೂಲಕ ನಗರವಾಸಿಗಳಲ್ಲಿ ಆತಂಕ್ಕೆ ಕಾರಣವಾಗಿದೆ. ಪುತ್ತೂರು ನಗರದ ಬೊಳುವಾರು,ನೆಹರುನಗರ, ಬಲಮುರಿ ಮೊದಲಾದ ಕಡೆಗಳಲ್ಲಿ ಹುಚ್ಚು ನಾಯಿಗಳು ಇಂದು 13 ಜನರಿಗೆ ಕಚ್ಚುವ ಮೂಲಕ ನಗರದಾದ್ಯಂತ ಭೀತಿಗೆ ಕಾರಣವಾಗಿದೆ.

ಹುಚ್ಚು ನಾಯಿ ಕಡಿತಕ್ಕೊಳಗಾದವರು ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮರಳಿದ್ದು, ಪುತ್ತೂರು ನಗರಸಭಾ ಅಧ್ಯಕ್ಷ ಜೀವಂಧರ್ ಜೈನ್ ಸರಕಾರಿ ಆಸ್ಪತ್ರೆ ಮತ್ತು ನಾಯಿ ಕಡಿತಕ್ಕೊಳಗಾದ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಶೀಘ್ರವೇ ಈ ಕುರಿತು ನಗರಸಭೆ ನಾಯಿಗಳ ಹಾವಳಿ ತಡೆಗಟ್ಟಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

Edited By : Somashekar
PublicNext

PublicNext

27/05/2022 12:47 pm

Cinque Terre

101.94 K

Cinque Terre

2