ದುಬೈ: ಇದು ನನ್ನ ಕೆಲಸ ಅಲ್ಲ. ಅದನ್ನ ನಾನ್ಯಾಕೆ ಮಾಡಬೇಕು? ಎಂದು ವಾದಿಸುವವರ ನಡುವೆ ದುಬೈನಲ್ಲಿ ಫುಡ್ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿರುವ ಯುವಕ ಒಂದು ನಿಸ್ವಾರ್ಥ ಕೆಲಸ ಮಾಡಿದ್ದಾನೆ.
ದುಬೈ ನಗರದ ನಡು ರಸ್ತೆಯಲ್ಲಿ ಬಿದ್ದಿದ್ದ ಇಟ್ಟಿಗೆಗಳನ್ನು ಕಂಡ ಈ ಯುವಕ ವಾಹನಗಳು ಹಾದು ಹೋಗುವವರೆಗೂ ಕಾದು ನಿಂತು ನಂತರ ಇಟ್ಟಿಗೆಗಳನ್ನು ಎತ್ತಿ ಬದಿಯಲ್ಲಿ ಇರಿಸಿದ್ದಾನೆ.
ಇದೇ ರಸ್ತೆಯ ಇನ್ನೊಂದು ಬದಿ ಕಾರಿನಲ್ಲಿ ಕುಳಿತಿದ್ದ ವ್ಯಕ್ತಿಯೊಬ್ಬರು ಇದೆಲ್ಲವನ್ನೂ ತಮ್ಮ ಮೊಬೈಲ್ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾರೆ. ಈ ವಿಡಿಯೋ ದುಬೈ ರಾಜಕುಮಾರ ಹಮಾದನ್ ಬಿನ್ ಮೊಹಮ್ಮದ್ ಗಮನಕ್ಕೆ ಬಂದಿದೆ. ಕೂಡಲೇ ಈ ವಿಡಿಯೋವನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡ ಅವರು, ಈತನ ಬಗ್ಗೆ ಮಾಹಿತಿ ಕೊಡಿ ಎಂದು ಬರೆದುಕೊಂಡಿದ್ದಾರೆ. ಮಾಹಿತಿ ಕ್ಷಣಾರ್ಧದಲ್ಲಿ ಹಬ್ಬಿ ಈತ ಯಾರು ಎಂಬ ಬಗ್ಗೆ ರಾಜಕುಮಾರ ಹಮಾದನ್‌ಗೆ ಗೊತ್ತಾಗಿದೆ. ಶೀಘ್ರದಲ್ಲಿ ಈತನನ್ನು ಭೇಟಿಯಾಗೋದಾಗಿ ಅವರು ಹೇಳಿದ್ದಾರೆ.
PublicNext
03/08/2022 10:43 pm