ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಕ್ರೇನ್‌ನಿಂದ ದಾವಣಗೆರೆಗೆ ಬಂದ ಐವರು ವಿದ್ಯಾರ್ಥಿಗಳು: ಸಂಸದ, ಡಿಸಿ ಭೇಟಿ

ದಾವಣಗೆರೆ: ಯುದ್ಧಗ್ರಸ್ಥ ಉಕ್ರೇನ್‌ನಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ ಐವರು ವಿದ್ಯಾರ್ಥಿಗಳು ದಾವಣಗೆರೆಗೆ ಆಗಮಿಸಿದ್ದಾರೆ. ಪರಿಸ್ಥಿತಿ ಬಿಗಡಾಯಿಸಿದ ಕಾರಣ ಅಲ್ಲಿ ವೈದ್ಯಕೀಯ ಶಿಕ್ಷಣ ಪಡೆಯುತ್ತಿದ್ದ ವಿದ್ಯಾರ್ಥಿಗಳು ವಾಪಸ್ ತಾಯ್ನಾಡಿಗೆ ಬಂದಿದ್ದಾರೆ. ಈ ಹಿನ್ನೆಲೆಯಲ್ಲಿ ಅವರ ಮನೆಗಳಿಗೆ ಸಂಸದ ಜಿ.ಎಂ.ಸಿದ್ದೇಶ್ವರ ಹಾಗೂ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಭೇಟಿ ನೀಡಿ, ಸಮಾಲೋಚನೆ ನಡೆಸಿದರು.

ಉಕ್ರೇನ್‌ನಿಂದ ದಾವಣಗೆರೆ ಮರಳಿರುವ ಡಿಸಿಎಂ ಟೌನ್‌ಶಿಪ್‌ನ ನಾಗರಾಜ್ ಸಂಜಯಕುಮಾರ್, ವಿದ್ಯಾನಗದ ನಿವಾಸಿಗಳಾದ ವಿನಯ್ ಕಲ್ಲಿಹಾಳ್ ಹಾಗೂ ಸಯದ್ ಅಬೀಬಾ ಅವರ ಮನೆಗೆ ಭೇಟಿ ನೀಡಿದ ಸಂಸದ ಜಿ.ಎಂ.ಸಿದ್ದೇಶ್ವರ, ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅವರು, ಉಕ್ರೇನ್‌ನಲ್ಲಿರುವ ಪರಿಸ್ಥಿತಿಯ ಬಗ್ಗೆ ಮಾಹಿತಿ ಪಡೆಯುವುದ ಜೊತೆಗೆ, ಉಕ್ರೇನಿಂದ ತವರಿಗೆ ಮರಳಿದ ರೀತಿಯ ಬಗ್ಗೆ ಮಾಹಿತಿ ಪಡೆದಿದ್ದಾರೆ.

Edited By : Nagesh Gaonkar
PublicNext

PublicNext

05/03/2022 04:54 pm

Cinque Terre

62.88 K

Cinque Terre

2

ಸಂಬಂಧಿತ ಸುದ್ದಿ