ಥೈಲ್ಯಾಂಡ್: ಬೆಂಗಳೂರು ಮೂಲದ ಟೆಕ್ಕಿಯೊಬ್ಬರು 14 ಕಿಲೋಮೀಟರ್ ಎತ್ತರದ ಆಗಸದಲ್ಲಿ ಕನ್ನಡ ಧ್ವಜ ಹಾರಿಸಿ ಕನ್ನಡ ಭಾಷಾ ಪ್ರೇಮ ತೋರಿದ್ದಾರೆ. ಇತ್ತೀಚೆಗೆ ,ಮಹಾರಾಷ್ಟ್ರದಲ್ಲಿ ನಾಡದ್ರೋಹಿ ಎಂಇಎಸ್ ಕಾರ್ಯಕರ್ತರು ಕನ್ನಡ ಧ್ವಜಕ್ಕೆ ಬೆಂಕಿ ಹಾಕಿದ್ದರು. ಇದರ ವಿರುದ್ಧ ಪ್ರತಿಭಟನೆ ವ್ಯಕ್ತಪಡಿಸಲು ಈ ಕನ್ನಡಾಭಿಮಾನಿ ಈ ರೀತಿ ಮಾಡಿದ್ದಾರೆ.
ಅಂದ್ ಹಾಗೆ ಇವರ ಹೆಸರು ಪುರುಷೋತ್ತಮ್. ಬೆಂಗಳೂರಿನ ನಾಗರಬಾವಿ ಮೂಲದವರಾದ ಆದ ಇವರು ಥೈಲ್ಯಾಂಡ್‌ನಲ್ಲಿ ಟೆಕ್ನಿಕಲ್ ಇಂಜಿನಿಯರ್ ಆಗಿ ಕೆಲಸ ಮಾಡ್ತಿದ್ದಾರೆ. ಸ್ಕೈ ಡೈವ್ ಮೂಲಕ 14 ಕಿಲೋ ಮೀಟರ್ ಎತ್ತರದ ಆಗಸದಲ್ಲಿ ಹೋಗಿ ಕನ್ನಡದ ಹೆಮ್ಮೆಯ ಧ್ವಜಕ್ಕೆ ಯಾರೂ ಅವಮಾನ ಮಾಡಲು ಸಾಧ್ಯವಿಲ್ಲ ಎಂಬುದನ್ನು ತೋರಿಸಿಕೊಟ್ಟಿದ್ದಾರೆ.
PublicNext
04/01/2022 12:20 pm