ಹೈದರಾಬಾದ್:ಏನೂ ಇಲ್ಲದವರು ಕೆಲವೊಮ್ಮೆ ಏನನ್ನೂ ಮಾಡದೇ ಕುಳಿತಲ್ಲೇ ಲಕ್ಷಾಧೀಶರಾಗುತ್ತಾರೆ. ಅಂತವರ ಲಿಸ್ಟ್‌ಗೆ ಈ ಕೆಂಪುಗಲ್ಲದ ಹುಡುಗಿ ಸೇರಿದ್ದಾಳೆ.
ಈ ವಿಷಯ ಹೇಳಿದರೆ ನೀವು ಛೀ ಥೂ...ಎನ್ನುತ್ತೀರಿ. ಆದರೆ ಇದನ್ನು ನೀವು ಹಿಂದೆಂದೂ ಕೇಳಿರಲು ಸಾಧ್ಯವಿಲ್ಲ. ಯಾಕಂದ್ರೆ ವಿಡಿಯೋದಲ್ಲಿ ಕಾಣುತ್ತಿರುವ ಈಕೆ ತಾನು ಬಿಡುವ 'ವಾಯು' ಅಂದ್ರೆ 'ಹೂಸು' ಬಿಟ್ಟು ಅದನ್ನು ಜಾರ್‌ನಲ್ಲಿ ಸಂಗ್ರಹಿಸಿ ಮಾರಾಟ ಮಾಡ್ತಾಳೆ. ಅದರಿಂದ ವಾರಕ್ಕೆ 38 ಲಕ್ಷ ಗಳಿಸುತ್ತಾಳೆ!
ನಿಮಗಿದು ಅಚ್ಚರಿ ಎನಿಸಬಹುದು. ಇನ್ನೂ ಕೆಲವರು 'ಏನ್ರೀ ಇದು ಅಸಹ್ಯ?' ಎನ್ನಬಹುದು. ನೀವು ಹಾಗೆಂದುಕೊಂಡರೂ ಆಕೆ ವಾರಕ್ಕೆ 38 ಲಕ್ಷ ಗಳಿಸುತ್ತಿರೋದು ಸತ್ಯ...ಸತ್ಯ...ಸತ್ಯ.
ಸ್ಟೇಫನಿ ಮ್ಯಾಟಿಯೋ ಎಂಬ ಹೆಸರಿನ ಈಕೆ ಟಿವಿ ರಿಯಾಲಿಟಿ ಷೋ '90 ಡೇ ಫಿಯಾನ್ಸಿ'ಯಲ್ಲಿ ಭಾಗವಹಿಸಿ ಕೆಲವೇ ದಿನಗಳಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಫೇಮಸ್ ಆಗಿದ್ದಾಳೆ. ಆಗಿನಿಂದ ಈಕೆಗೆ ಅಭಿಮಾನಿಗಳೂ ಹುಟ್ಟಿಕೊಂಡಿದ್ದಾರೆ.
ಅಲ್ಲಿಂದ ಈಕೆಯ ಅದೃಷ್ಟದ ದಿನಗಳು ಆರಂಭವಾಗಿವೆ. ತನ್ನದೇ ಆದ ಯೂಟ್ಯೂಬ್ ಚಾನೆಲ್ ಆರಂಭಿಸಿದ ಈಕೆ ಮತ್ತಷ್ಟು ಫೇಮಸ್ ಆಗಿದ್ದಾಳೆ. ಸದ್ಯ ಈಕೆ ತನ್ನ ವಾಯು ಅರ್ಥಾತ್ 'ಹೂಸ'ನ್ನು ಜಾರ್‌ನಲ್ಲಿ ಸಂಗ್ರಹಿಸಿ ಅದರಲ್ಲಿ ಹೂವಿನ ದಳಗಳನ್ನು ಇರಿಸಿ ಮಾರುತ್ತಿದ್ದಾಳೆ. ಇದರಿಂದ ಹೂವಿನ ಪಕಳೆಗಳು ಮತ್ತಷ್ಟು ಪರಿಮಳ ಸೂಸುತ್ತವಂತೆ. ಈಗಲೂ ಸ್ಟೇಫನಿಯ ಹೂಸಿಗೆ ಬೇಡಿಕೆ ಬರುತ್ತಲೇ ಇದೆ. ಇದಕ್ಕಾಗಿ ಅವಳು ಬೀನ್ಸ್, ಮೊಸರು, ಹಾಗೂ ಗಟ್ಟಿಯಾಗಿ ಬೇಯಿಸಿದ ಮೊಟ್ಟೆಗಳನ್ನು ಸೇವಿಸುತ್ತಾಳಂತೆ.
PublicNext
23/12/2021 04:01 pm