ಅಮೆರಿಕಾ: ದಾರಿಯಲ್ಲಿ ದುಡ್ಡು ಬಿದ್ದರೇ ಯಾರು ಬಿಡ್ತಾರೆ ಹೇಳಿ. ಎಲ್ಲರೂ ಎಷ್ಟು ಸಾಧ್ಯವೋ ಅಷ್ಟು ಬಾಚಿಕೊಂಡು ಅಲ್ಲಿಂದ ಓಡಿ ಬಿಡ್ತಾರೆ. ದಕ್ಷಿಣದ ಅಮೆರಿಕದಲ್ಲೂ ಆಗಿದ್ದು ಅದೇನೆ. ರಸ್ತೆ ಮೇಲೆ ಬಿದ್ದ ದುಡ್ಡುನ್ನ ಜನ ಮನಸೋಯಿಚ್ಛೆ ಆರಿಸಿಕೊಂಡು ಖುಷಿಪಟ್ಟಿದ್ದಾರೆ. ಈ ದೃಶ್ಯವನ್ನ ಒಬ್ಬ ಮಹಿಳೆ ಸೆರೆಹಿಡಿದು ಎಲ್ಲೆಡೆ ಶೇರ್ ಮಾಡಿದ್ದಾಳೆ. ಅದೇ ಈಗ ಭಾರಿ ವೈರಲ್ ಆಗುತ್ತಿದೆ.
ಅಂದ್ಹಾಗೆ ಸ್ಯಾನ್ ಡಿಗೋದಿಂದ ಭದ್ರತಾ ಸಿಬ್ಬಂದಿ ಟ್ರಕ್‌ವೊಂದರಲ್ಲಿ ದುಡ್ಡು ತುಂಬಿದ ಚೀಲವನ್ನ ತೆಗೆದುಕೊಂಡು ಹೋಗುತ್ತಿತ್ತು. ಫೆಡರಲ್ ಡೆಪಾಸಿಟ್ ಇನ್ಸೂರನ್ಸ್ ಕಾರ್ಪೋರೇಶನ್ ಕಚೇರಿ ಕಡೆಗೆ ಹೊರಟ್ಟಿತ್ತು.ಆಗಲೇ ಟ್ರಕ್ ನ ಒಂದು ಡೋರ್ ಓಪನ್ ಆಗಿ ದುಡ್ಡಿದ್ದ ಚೀಲವೂ ತೆರೆದುಕೊಂಡು,ದಕ್ಷಿಣ ಕ್ಯಾಲಿಫೋರ್ನಿಯಾದ ಕಾರ್ಲ್ಸ್‌ಡ ಪ್ರಮುಖ ರಸ್ತೆಯಲ್ಲಿ ಬೀಳ್ತಾ ಹೋಗಿವೆ.
ಇದನ್ನ ಕಂಡ ಜನ 1 ಮತ್ತು 20 ಡಾಲರ್ ಮುಖಬೆಲೆ ನೋಟುಗಳನ್ನ ಹುಚ್ಚರಂತೆ ಆಯ್ದುಕೊಂಡು ಖುಷಿಪಟ್ಟಿದ್ದಾರೆ. ಆದರೆ ಕ್ಯಾಲಿಪೋರ್ನಿಯಾದ ಹೈವೆ ಪೆಟ್ರೊಲ್ ನ ಸಾರ್ಜೆಂಟ್ ಕರ್ಟಿಸ್ ಮಾರ್ಟಿನ್ ಹೇಳುವಂತೆ ಅನೇಕರು ಈ ದುಡ್ಡನ್ನ ವಾಪಸ್ ಕೊಟ್ಟಿದ್ದಾರೆ. ಕೊಡದೇ ಇದ್ದರೆ ಅವರ ವಿರುದ್ಧ ಕ್ರಿಮಿನಲ್ ಮೊಕ್ಕದ್ದಮೆ ಹಾಕಲಾಗುವುದು ಅಂತಲೂ ಹೇಳಿದ್ದಾರೆ.ಜನ ದುಡ್ಡು ತೆಗೆದುಕೊಳ್ಳುತ್ತಿದ್ದ ದೃಶ್ಯವನ್ನ ವೃತ್ತಿಯಲ್ಲಿ ಬಾಡಿ ಬಿಲ್ಡರ್ ಆಗಿರೋ ಡೆಮಿ ಬಾಗ್ಬಿ ತೆಗೆದು ಎಲ್ಲೆಡೆ ಶೇರ್ ಮಾಡಿ ಮತ್ತಷ್ಟು ವೈರಲ್ ಮಾಡಿದ್ದಾರೆ.
PublicNext
21/11/2021 06:32 pm