ಬ್ರುಸ್ಸೆಲ್: ಮಹಿಳೆಯೊಬ್ಬಳು ಮೃಗಾಲಯದ ಚಿಂಪಾಂಜಿಯ ಪ್ರೀತಿಗೆ ಬಿದ್ದಿದ್ದಾಳೆ. ವಿಶೇಷವೆಂದರೆ ಚಿಂಪಾಂಜಿ ಕೂಡ ಆಕೆಯನ್ನು ಮನಸಾರೆ ಪ್ರೀತಿಸುತ್ತಿದೆ. ಈ ಅಚ್ಚರಿಯ ಘಟನೆ ನಡೆದಿರುವುದು ಬೆಲ್ಜಿಯಂನ ಆ್ಯಂಟ್ವರ್ಪ್ ಮೃಗಾಲಯದಲ್ಲಿ!
ಆ್ಯಂಟ್ವರ್ಪ್ ಮೃಗಾಲಯದಿಂದ ಸುಮಾರು 80 ಕಿ.ಮೀ. ದೂರದಲ್ಲಿರುವ ಮಹಿಳೆ ಕಳೆದ 4 ವರ್ಷಗಳಿಂದ ಪ್ರತಿ ವಾರವೂ ಮೃಗಾಲಯಕ್ಕೆ ಬರುತ್ತಿದ್ದಳು. ಪ್ರತಿ ಬಾರಿ ಚಿಂಪಾಜಿ ಬಳಿ ಹೋಗಿ ಅದರೊಂದಿಗೆ ಸಂವಹನ ನಡೆಸುತ್ತಿದ್ದಳು. ಗ್ಲಾಸ್ ರೂಂ ಒಳಗಿರುತ್ತಿದ್ದ 'ಚಿಟಾ' ಹೆಸರಿನ ಚಿಂಪಾಂಜಿಯೊಂದಿಗೆ ಸನ್ನೆಯಲ್ಲೇ ಮಾತನಾಡುತ್ತಿದ್ದಳು. ಚಿಟಾ ಹಾಗೂ ಆಕೆ ಪರಸ್ಪರ ಮುತ್ತನ್ನೂ ಕೊಟ್ಟುಕೊಳ್ಳುತ್ತಿದ್ದಾರಂತೆ.
ಇತ್ತೀಚೆಗೆ ಚಿಟಾ, ಆಕೆಯನ್ನು ಬಿಟ್ಟು ಬೇರಾರೊಂದಿಗೂ ಬೆರೆಯದೆ ಒಬ್ಬನೇ ಕುಳಿತಿರುತ್ತಿದ್ದ. ಈ ಹಿನ್ನೆಲೆಯಲ್ಲಿ ಆ ಮಹಿಳೆಗೆ ಮೃಗಾಲಯ ಪ್ರವೇಶಿಸದಂತೆ ನಿರ್ಬಂಧ ಹೇರಲಾಗಿದೆ. ಮೃಗಾಲಯ ಅಧಿಕಾರಿಗಳು ಈ ಬಗ್ಗೆ ಮಹಿಳೆಯನ್ನು ಕೇಳಿದಾಗ, ಆಕೆ ಮೊದಲು ತಾನು ಪ್ರಾಣಿ ಪ್ರಿಯೆ ಎಂದಿದ್ದು, ನಂತರ ಚಿಂಪಾಂಜಿ ಜೊತೆಗೆ ಅಫೇರ್ ಹೊಂದಿರುವ ಬಗ್ಗೆ ಬಾಯಿ ಬಿಟ್ಟಿದ್ದಾಳೆ. ಇದೀಗ ಮೃಗಾಲಯ ಪ್ರವೇಶಕ್ಕೆ ನಿರ್ಬಂಧ ಹೇರಿರುವ ಕ್ರಮವನ್ನು ಖಂಡಿಸಿ ನ್ಯಾಯಾಲಯದ ಮೆಟ್ಟಿಲು ಏರಲು ಈ ದುಃಖತಪ್ತ ಮಹಿಳೆ ನಿರ್ಧರಿಸಿದ್ದಾಳೆ!
PublicNext
24/08/2021 12:47 pm