ವಾಷಿಂಗ್ಟನ್: ಪ್ರಾಣಿ ಪ್ರಿಯರಲ್ಲಿಯೇ ಈ ವ್ಯಕ್ತಿ ನಿಜಕ್ಕೂ ವಿಶೇಷ ಎಂದರೆ ತಪ್ಪಾಗಲಾರದು.. ಯಾಕೆಂದರೆ ಇಲ್ಲೊಬ್ಬ ಉದ್ಯಮಿ ತನ್ನ 36 ಕೋಟಿ ರೂ.ಮೌಲ್ಯದ ಆಸ್ತಿಯನ್ನು ತನ್ನ ಸಾಕು ನಾಯಿಯ ಹೆಸರಿಗೆ ಬರೆದು ಪ್ರಾಣ ಬಿಟ್ಟಿದ್ದಾರೆ.
ಹೌದು ಇಂತಹದೊಂದು ಘಟನೆ ಅಮೆರಿಕದಲ್ಲಿ ನಡೆದಿದೆ.ಅಮೆರಿಕದ ಆಗರ್ಭ ಶ್ರೀಮಂತ ಬಿಲ್ ಡೋರಿಸ್ ಎಂಟು ವರ್ಷಗಳಿಂದ ಲೂಲು ಹೆಸರಿನ ನಾಯಿಯನ್ನು ಸಾಕಿದ್ದ. ತಾನು ಸತ್ತ ನಂತರ ತನ್ನ 5 ಮಿಲಿಯನ್ ಡಾಲರ್ (ಸರಿ ಸುಮಾರು 36 ಕೋಟಿ ರೂಪಾಯಿ) ಆಸ್ತಿಯನ್ನು ತನ್ನ ಲೂಲುವನ್ನುನೋಡಿಕೊಳ್ಳುವ ಟ್ರಸ್ಟ್ ಗೆ ಈ ಆಸ್ತಿ ಸೇರುತ್ತದೆ ಎಂದು ಬರೆದಿಟ್ಟು ಪ್ರಾಣ ಬಿಟ್ಟಿದ್ದಾನೆ.
ಡೋರಿಸ್ ಕೊನೆಯಾಸೆಯಂತೆ ಟ್ರಸ್ಟ್ ನಾಯಿಯ ಜವಾಬ್ದಾರಿಯನ್ನು ಹೊತ್ತಿದೆ. ಆತನ ಸ್ನೇಹಿತೆ ಮಾರ್ಥಾ ಬರ್ಟನ್ ಮನೆಯಲ್ಲಿ ಲೂಲುವನ್ನು ಬಿಡಲಾಗಿದೆ. ಲೂಲುವನ್ನು ನೋಡಿಕೊಳ್ಳುವುದಕ್ಕಾಗಿ ಪ್ರತಿ ತಿಂಗಳಿಗೆ ಇಂತಿಷ್ಟು ಎಂದು ಬರ್ಟನ್ ಗೆ ಹಣ ನೀಡಲಾಗುತ್ತಿದೆ.ಡೋರಿಸ್ ನಾಯಿಯನ್ನು ಅದೆಷ್ಟರ ಮಟ್ಟಿಗೆ ಹಚ್ಚಿಕೊಂಡಿದ್ದ ಎನ್ನುವುದನ್ನು ಕಣ್ಣಾರೆ ಕಂಡಿರುವ ಬರ್ಟನ್ ಲೂಲುವನ್ನು ಅಷ್ಟೇ ಪ್ರೀತಿಯಿಂದ ಸಾಕುತ್ತಿದ್ದಾರೆ.
ಲೂಲುವಿನ ಜೀವಿತಾವಧಿಗೆ ಬೇಕಾಗಿರುವುದಷ್ಟೇ ಅಲ್ಲದೆ ಅದರ ನೂರು ಪಟ್ಟು ಹಣವನ್ನು ಡೋರಿಸ್ ಟ್ರಸ್ಟ್ ಹೆಸರಿಗೆ ಮಾಡಿಟ್ಟಿದ್ದು, ನಿಜಕ್ಕೂ ಹೆಮ್ಮೆಯ ಸಂಗತಿ.
PublicNext
13/02/2021 04:46 pm