ಕಾಲ ಬಾಳಾ ಕೆಡಾಕುಂತೈತಿ ನೋಡ್ರಿ... ನಡಿಬಾರದ್ ಎಲ್ಲಾ ನಡಿಕುಂತೈತಿ... ಮಳೆಪ್ಪಾ ಮಳೆಗಾಲ ಅಷ್ಟೇ ಅಲ್ಲದೆ ಬ್ಯಾಸಿಗ್ಯಾಗೂ ಭೂಮಿ ಮ್ಯಾಲೆ ಜಲಧಾರೆ ಹರಿಸ್ತಾನ... ಕಪ್ಪೆ ಹಾವನ್ನ ತಿಂದಿದ್ದನ್ನ ಕೇಳಿದ್ದು ಆಯ್ತು, ನೋಡಿದ್ದು ಆಯ್ತು. ಅದೆಲ್ಲ ಇರಲಿ ಜೇಡ ಪಕ್ಷಿ ತಿಂದಿದ್ದನ್ನ ನೀವು ನೋಡಿರೇನ್ರಿ.... ಯಪ್ಪಾ ಕರೆ ಬಣ್ಣದ ಜೇಡವೊಂದು ತನಗಿಂತ ದೊಡ್ಡ ಗಾತ್ರದ ಪಕ್ಷಿ ತಿಂದ್ ಅಚ್ಚರಿ ಮೂಡಿಸೈತಿ....
ನೇಚರ್ ಇಸ್ ಸ್ಕ್ಯಾರಿ ಹೆಸರಿನ ಟ್ವಿಟರ್ ಖಾತೆಯಲ್ಲಿ ಈ ವಿಡಿಯೋವನ್ನು ಟ್ವೀಟ್ ಮಾಡಲಾಗಿದ್ದು, ಅವಿಕುಲೇರಿಯಾ ಹೆಸರಿನ ಜೇಡವು ಪಕ್ಷಿಯನ್ನು ತಿನ್ನುತ್ತಿದೆ ಎಂದು ಬರೆಯಲಾಗಿದೆ.
ಮೈನವಿರೇಳಿಸುವ 54 ಸೆಕೆಂಡಿನ ವಿಡಿಯೋದಲ್ಲಿ ದೊಡ್ಡ ಗಾತ್ರದ ಜೇಡವೊಂದು ನಿಯಮಿತ ಗಾತ್ರದ ಪಕ್ಷಿಯನ್ನು ನಿಧಾನವಾಗಿ ತಿನ್ನುತ್ತಿದೆ. ಸದ್ಯ ವಿಡಿಯೋ ವೈರಲ್ ಆಗಿದ್ದು, ಈಗಾಗಲೇ 3 ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಣೆ ಮಾಡಿದ್ದಾರೆ.
ನಾವೆಂದಿಗೂ ಈ ಇಂತಹ ವಿಡಿಯೋ ನೋಡಿಯೇ ಇಲ್ಲವೆಂದು ಅನೇಕ ನೆಟ್ಟಿಗರು ಪ್ರತಿಕ್ರಿಯೆ ನೀಡಿದ್ದಾರೆ. ಅವಿಕುಲೇರಿಯಾ ಜೇಡವು ಉಷ್ಣವಲಯದ ದಕ್ಷಿಣ ಅಮೆರಿಕಾಕ್ಕೆ ಸೇರಿದ್ದಾಗಿದೆ. ಇದು ತನ್ನ ಪ್ರಾಣ ರಕ್ಷಣೆಗಾಗಿ ಆಕ್ರಮನಕಾರಿ ದಾಳಿ ಮಾಡುತ್ತದೆ.
PublicNext
20/09/2020 07:02 pm