ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಜಾಗತಿಕ ಜನಪ್ರಿಯತೆಯಲ್ಲಿ ಪ್ರಧಾನಿ ಫಸ್ಟ್

ಹೊಸದಿಲ್ಲಿ: ಭಾರತದ ಪ್ರಧಾನಿ ಮೋದಿ ವಿಶ್ವಕ್ಕೆ ಅಚ್ಚುಮೆಚ್ಚು.

ಸದ್ಯ ಅಮೆರಿಕದ ಮಾರುಕಟ್ಟೆ ಅಧ್ಯಯನ ಹಾಗೂ ಡೇಟಾ ಇಂಟೆಲಿಜೆನ್ಸ್ ಸಂಸ್ಥೆ “ಮಾರ್ನಿಂಗ್ ಕನ್ಸಲ್ಟ್’ ಜಗತ್ತಿನ ಅತೀ ಜನಪ್ರಿಯ ರಾಷ್ಟ್ರ ನಾಯಕರ ಪಟ್ಟಿ ಬಿಡುಗಡೆ ಮಾಡಿದ್ದು, ಪ್ರಧಾನಿ ನರೇಂದ್ರ ಮೋದಿ ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವುದು ವಿಶೇಷ.

ಭಾರತ, ಅಮೆರಿಕ, ಜಪಾನ್, ಬ್ರೆಜಿಲ್ ಸೇರಿದಂತೆ 13 ರಾಷ್ಟ್ರಗಳ ನಾಯಕರಲ್ಲಿ ನರೇಂದ್ರ ಮೋದಿಯವರಿಗೇ ಅತೀ ಹೆಚ್ಚು ಅಂಕಗಳು ದೊರೆತಿವೆ.

ಈ ವಿಷಯವನ್ನು ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ಗೌರವಾನ್ವಿತ ಪ್ರಧಾನಿ ನರೇಂದ್ರ ಮೋದಿಯವರ ಜನಪ್ರಿಯತೆಯು ದೇಶದ ಎಲ್ಲ ಜನ ವರ್ಗಗಳಲ್ಲಿ ಅಬಾಧಿತವಾಗಿ ಏರಿಕೆಯಾಗುತ್ತಿರುವುದರ ಜತೆಗೇ, ದೇಶದೆಡೆಗಿನ ಅವರ ಸಮರ್ಪಣ ಮನೋಭಾವಕ್ಕೆ ಜಾಗತಿಕವಾಗಿಯೂ ಮನ್ನಣೆ ಗಳಿಸುತ್ತಿದ್ದಾರೆ.

ಈ ಕಠಿನ ಸಮಯದಲ್ಲಿ ಪ್ರಧಾನಿ ಮೋದಿ ಜಾಗತಿಕ ನಾಯಕರಲ್ಲಿ ನಂಬರ್ 1 ಸ್ಥಾನದಲ್ಲಿದ್ದಾರೆ ಎಂದು ನಡ್ಡಾ ಟ್ವೀಟ್ ಮಾಡಿದ್ದಾರೆ.

ಇನ್ನೊಂದೆಡೆ ರಕ್ಷಣ ಸಚಿವ ರಾಜನಾಥ್ ಸಿಂಗ್ ಅವರು, “”ಪ್ರಧಾನಿ ಮೋದಿಯವರ ಜನಪ್ರಿಯತೆ ಮತ್ತು ವಿಶ್ವಾಸಾರ್ಹತೆಯನ್ನು ಜಾಗತಿಕವಾಗಿ ಗುರುತಿಸಲಾಗಿದೆ.

ಈ ಸಾಂಕ್ರಾಮಿಕದ ಸಮಯದಲ್ಲಿ ಅವರು ತೋರುತ್ತಿರುವ ನಾಯಕತ್ವ ಗುಣವನ್ನು ಕೊಂಡಾಡಲಾಗುತ್ತಿದೆ.

ಇದು ನಿಜಕ್ಕೂ ಭಾರತಕ್ಕೆ ಹೆಮ್ಮೆಯ ಸಮಯ” ಎಂದಿದ್ದಾರೆ.

Edited By : Nirmala Aralikatti
PublicNext

PublicNext

03/01/2021 07:34 am

Cinque Terre

95.21 K

Cinque Terre

36

ಸಂಬಂಧಿತ ಸುದ್ದಿ