ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಸವ ಜಯಂತಿ ಆಚರಿಸಲು ನಿರ್ಧರಿಸಿದ ತೆಲಂಗಾಣ ಸರ್ಕಾರ

ಹೈದರಾಬಾದ್: ಮೇ 3ರಂದು ರಾಜ್ಯದಾದ್ಯಂತ ಜಗಜ್ಯೋತಿ ಬಸವೇಶ್ವರ ಜಯಂತಿ ಆಚರಿಸುವಂತೆ ತೆಲಂಗಾಣ ಸರ್ಕಾರ ಆದೇಶ ನೀಡಿದೆ. ಇನ್ನು ಮುಂದೆ ಅಕ್ಷಯ ತೃತೀಯದಂದು ಪ್ರತಿ ವರ್ಷ ತೆಲಂಗಾಣ ರಾಜ್ಯದಲ್ಲಿ ಬಸವ ಜಯಂತಿ ನಡೆಯಲಿದೆ ಎಂದು ಘೋಷಿಸಿದೆ.

ತೆಲಂಗಾಣ ಸರ್ಕಾರದ ಈ ನಡೆಯನ್ನು ಜಾಗತಿಕ ಲಿಂಗಾಯತ ಮಹಾಸಭಾ ಸ್ವಾಗತಿಸಿದೆ. ಈ ಕುರಿತು ಟ್ವೀಟ್ ಮಾಡಿದ್ದು, “ಬಸವ ಜಯಂತಿಯನ್ನು ತೆಲಂಗಾಣ ರಾಜ್ಯದಲ್ಲಿ ಆಚರಿಸಲು ನಿರ್ಧರಿಸಿದ್ದಕ್ಕಾಗಿ ಶರಣು ಶರಣಾರ್ಥಿ. ನಿಮ್ಮ ನಿರ್ಧಾರವನ್ನು ನಾವು ಸ್ವಾಗತಿಸುತ್ತೇವೆ ತೆಲಂಗಾಣದ ಎಲ್ಲಾ ನಾಗರಿಕರಿಗೆ ಬಸವ ಜಯಂತಿ 2022ರ ಶುಭಾಶಯಗಳು” ಎಂದು ತಿಳಿಸಿದೆ.

Edited By : Nagaraj Tulugeri
PublicNext

PublicNext

25/04/2022 05:47 pm

Cinque Terre

149.92 K

Cinque Terre

8

ಸಂಬಂಧಿತ ಸುದ್ದಿ