ಚೆನ್ನೈ: ಸಾಧನೆಗೆ ಕೊರತೆಗಳು ಅಡ್ಡಿ ಆಗಬಾರದು. ನನಗೆ ಬೆಂಬಲಕ್ಕೆ ಯಾರೂ ಇಲ್ಲ. ಮಾರ್ಗದರ್ಶಕ ಯಾರೂ ಇಲ್ಲ. ಪ್ರೋತ್ಸಾಹಿಸುವವರೂ ಇಲ್ಲ. ಇವೇ ಮುಂತಾದ ಕಾರಣ ಹೇಳುತ್ತ ಕೂರುವ ಜನರ ನಡುವೆ ಇಲ್ಲೊಬ್ಬ ಹೊಟೇಲ್ ಮಾಣಿ ಐಎಎಸ್ ಅಧಿಕಾರಿ ಆಗಿದ್ದಾರೆ.
ತಮಗಿದ್ದ ಇತಿ-ಮಿತಿಗಳನ್ನು ಮೀರಿದ ತಮಿಳುನಾಡಿನ ವೆಲ್ಲೂರು ಜಿಲ್ಲೆಯ ಸಾಮಾನ್ಯ ಯುವಕ ಕೆ. ಜಯಗಣೇಶ್ ಐಎಎಸ್ ಅಧಿಕಾರಿಯಾಗಿ ಸಾಮಾನ್ಯರ ಸೇವೆ ಮಾಡುತ್ತಿದ್ದಾರೆ. ಬಡತನದ ಕುಟುಂಬದಿಂದ ಬಂದ ಜಯಗಣೇಶ್ ತಮ್ಮ ಗ್ರಾಮದ ಶಾಲೆಯಲ್ಲಿ ಹತ್ತನೇ ತರಗತಿ ನಂತರ ಪಾಲಿಟೆಕ್ನಿಕ್ ಕಾಲೇಜಿಗೆ ಸೇರಿಕೊಂಡರು. ಅಲ್ಲಿ ಶೇಕಡಾ 91 ಅಂಕಗಳೊಂದಿಗೆ ಉತ್ತೀರ್ಣರಾದರು. ನಂತರ ತಂದೈ ಪೆರಿಯಾರ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಮೆಕ್ಯಾನಿಕಲ್ ಎಂಜಿನಿಯರಿಂಗ್ ಓದಿದರು. ಓದು ಮುಗಿದ ನಂತರ ಕಂಪನಿಯೊಂದರಲ್ಲಿ ಕೆಲಸವೂ ಸಿಕ್ಕಿತು, ಅಲ್ಲಿ ತಿಂಗಳಿಗೆ 2,500 ರೂಪಾಯಿ ಸಂಬಳ ಪಡೆಯುತ್ತಿದ್ದರು. ಆದರೆ, ಈ ಸಂಬಳದಲ್ಲಿ ಕುಟುಂಬ ನಡೆಸುವುದು ಅಷ್ಟು ಸುಲಭವಲ್ಲ ಎಂದು ಅರಿವಾಯಿತು. ಮತ್ತೊಂದೆಡೆ ಐಎಎಸ್ ಆಗುವ ಕನಸು ಕೂಡ ಇದ್ದಿದ್ದರಿಂದ ಆ ಕೆಲಸ ಬಿಟ್ಟು ಯುಪಿಎಸ್‌ಸಿ ಪರೀಕ್ಷೆ ಎದುರಿಸಲು ತಯಾರಿ ಆರಂಭಿಸಿದ್ದಾರೆ. ಇದರಲ್ಲಿ ಆರು ಪ್ರಯತ್ನಗಳಲ್ಲಿ ಅವರು ಅನುತ್ತೀರ್ಣರಾದರೂ ಎದೆಗುಂದದೇ ಏಳನೇ ಬಾರಿ ಅವರು 156 ನೇ ರ‍್ಯಾಂಕ್ ಗಳಿಸುವ ಮೂಲಕ ಯುಪಿಎಸ್‌ಸಿ ಪಾಸ್ ಮಾಡಿದ್ದಾರೆ.
ಆಯ್ಕೆಯಾದ 700ಕ್ಕೂ ಹೆಚ್ಚು ಅಭ್ಯರ್ಥಿಗಳಲ್ಲಿ 156ನೇ ರ‍್ಯಾಂಕ್ ಪಡೆದಿದ್ದೆ. ಫಲಿತಾಶ ಪ್ರಕಟವಾದ ನಂತರ ಹಲವು ವರ್ಷಗಳಿಂದ ನಡೆಯುತ್ತಿದ್ದ ಯುದ್ಧವನ್ನು ಗೆದ್ದಂತೆ ಭಾಸವಾಯಿತು. ನಾನು ಹಲವು ವರ್ಷಗಳ ಬಳಿಕ ಮುಕ್ತ ಸಮಾಧಾನವನ್ನು ಅನುಭವಿಸಿದೆ" ಎಂದು ಅವರು ಸಂದರ್ಶನವೊಂದರಲ್ಲಿ ಜಯಗಣೇಶ್ ಹೇಳಿಕೊಂಡಿದ್ದಾರೆ.
PublicNext
22/05/2022 03:56 pm