ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಈ ವಿಡಿಯೋ ನಿಮ್ಮ ಹೃದಯವನ್ನು ಸ್ಪರ್ಶಿಸಬಹುದು

ತಿರುವನಂತಪುರಂ : ಕೇರಳದ ಸಾಸ್ತಾಮಕೋಟಾದ ಡಿಬಿ ಕಾಲೇಜ ಕ್ಯಾಂಪಸ್ ನಲ್ಲಿ ವಿಕಲಚೇತನ ಯುವಕ ಅಲಿಫ್ ಮುಹಮ್ಮದ್ ಗೆ ಆತನ ಇಬ್ಬರು ಸ್ನೇಹಿತೆಯರಾದ ಆರ್ಯ ಮತ್ತು ಅರ್ಚನಾ ಸಹಾಯ ಮಾಡಿದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದೆ.

ಇನ್ನು ಈ ವಿಡಿಯೋವನ್ನು ತನ್ನ ಇನ್ ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡ ಅಲಿಫ್ "ನಿಮ್ಮ ಅದ್ಭುತ ಸ್ನೇಹಿತರೊಂದಿಗೆ ನೀವು ನೀರು ಕುಡಿದರು, ಅದು ಸಿಹಿಯಾಗಿರುತ್ತದೆ" ವಿಡಿಯೋಗೆ ಶೀರ್ಷಿಕೆ ಬರೆದಿದ್ದಾರೆ.

"ನನಗೆ, ಜೀವನವು ಯಾವಾಗಲೂ ನನ್ನ ಸ್ನೇಹಿತರ ಜೊತೆಯಲ್ಲಿದೆ. ನಾನು ನನ್ನ ಸ್ನೇಹಿತರೊಂದಿಗೆ ದ್ವಿಚಕ್ರ ವಾಹನದಲ್ಲಿ ಕಾಲೇಜಿಗೆ ಹೋಗುತ್ತೇನೆ. ಕಾಲೇಜಿನಲ್ಲಿ ಅವರು ನನ್ನನ್ನು ಕರೆದುಕೊಂಡು ಹೋಗುತ್ತಾರೆ. ಇದು ನನಗೆ ದಿನಚರಿಯಾಗಿದೆ. ಅವರು ನನ್ನನ್ನು ಎಂದಿಗೂ ಕೀಳರಿಮೆ ದೃಷ್ಟಿಯಿಂದ ನೋಡಿಲ್ಲ ಬದಲಿಗೆ ಸಹಾನುಭೂತಿಯ ನೋಟದಿಂದ ನೋಡಿದ್ದಾರೆ. ಅವರು ನನ್ನನ್ನು ಸಾಮಾನ್ಯ ಹುಡುಗನಂತೆ ನಡೆಸಿಕೊಳ್ಳುತ್ತಾರೆ ಅದಕ್ಕೆ ನನಗೆ ನನ್ನ ಸ್ನೇಹಿತರು ಪ್ರಾಣ ನಾನು ಅವರನ್ನು ಸಧಾ ಪ್ರೀತಿಸುತ್ತೇನೆ. ಈ ಚಿತ್ರ ನನಗೆ ತುಂಬಾ ಪ್ರಿಯವಾಗಿದೆ" ಎಂದು ಅಲಿಫ್ ಹೇಳಿಕೊಂಡಿದ್ದಾರೆ.

ಬಿಕಾಂ ಅಂತಿಮ ವರ್ಷದ ವಿದ್ಯಾರ್ಥಿ ಅಲಿಫ್ ಪರೀಕ್ಷೆಯಲ್ಲಿ ನಿರತರಾಗಿದ್ದಾರೆ. ಅವರು ಪ್ರಯಾಣವನ್ನು ಇಷ್ಟಪಡುತ್ತಾರೆ ಮತ್ತು ಅವರ ಕನಸಿನ ತಾಣ ದುಬೈ. ನಟ ದುಲ್ಕರ್ ಅವರ ಅಭಿಮಾನಿಯಾಗಿರುವ ಅಲಿಫ್ ಒಮ್ಮೆ ಸಿನಿಮಾ ಜಗತ್ತಿಗೆ ಬರುವ ಕನಸು ಕಂಡಿದ್ದಾರೆ.

Edited By : Nirmala Aralikatti
PublicNext

PublicNext

07/04/2022 04:47 pm

Cinque Terre

126.51 K

Cinque Terre

17

ಸಂಬಂಧಿತ ಸುದ್ದಿ