ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಈ ಶಾಲೆಯಲ್ಲಿ 11 ಜೋಡಿ ಅವಳಿ ಮಕ್ಕಳು!; ಗುರುತು ಹಿಡಿಯಲು ಪಡಿಪಾಟಲು

ಮಂಗಳೂರು: ಸಾಮಾನ್ಯವಾಗಿ ನಾವು ಒಂದು ಶಾಲೆಯಲ್ಲಿ ಒಂದು ಅಥವಾ ಎರಡು ಜೋಡಿ ಅವಳಿ ಮಕ್ಕಳನ್ನು ನೋಡಿರುತ್ತೇವೆ. ಆದ್ರೆ, ಇಲ್ಲೊಂದು ಶಾಲೆಯಲ್ಲಿ 11 ಜೋಡಿ ಅವಳಿ ವಿದ್ಯಾರ್ಥಿಗಳಿದ್ದಾರೆ!

ಹೌದು, ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಹೊರವಲಯದಲ್ಲಿರುವ

ಕೈರಂಗಳದ ಪುಣ್ಯಕೋಟಿ ನಗರದಲ್ಲಿರುವ ಶ್ರೀ ಶಾರದಾ ಗಣಪತಿ ವಿದ್ಯಾಕೇಂದ್ರ ಈ ವಿಶೇಷ ಕಾರಣಕ್ಕಾಗಿ ಗಮನ ಸೆಳೆಯುತ್ತಿದೆ.

4ನೇ ತರಗತಿಯಲ್ಲಿ 3 ಜೋಡಿ, 5ನೇ ತರಗತಿಯಲ್ಲಿ 2 ಹಾಗೂ 6, 7, 8 ಮತ್ತು 10ನೇ ತರಗತಿಯಲ್ಲಿ ತಲಾ 1 ಹಾಗೂ ಪಿಯುಸಿಯಲ್ಲಿ 2 ಜೋಡಿ ಅವಳಿಗಳಿದ್ದಾರೆ. 4ನೇ ತರಗತಿಯಲ್ಲಿ ಜ್ಞಾನೇಶ್- ಜಯೇಶ್, ಸಂಜನ- ಸಂಜಯ, ಲತೇಶ್- ಲವೇಶ್, 5ನೇ ತರಗತಿಯಲ್ಲಿ ಧನ್ಯಶ್ರೀ- ಧನುಷ್, ಚೈತ್ರಾ- ಚಂದನ, 6ನೇ ತರಗತಿಯಲ್ಲಿ ಭವ್ಯಶ್ರೀ- ದಿವ್ಯಶ್ರೀ, 7ನೇ ತರಗತಿಯಲ್ಲಿ ಕೀರ್ತಿ- ಕೀರ್ತನಾ, 8ನೇ ತರಗತಿಯಲ್ಲಿ ಸುಜನ- ಸುಹನ, 10ನೇ ತರಗತಿಯಲ್ಲಿ ಶ್ರೀನಾಥ್- ಸುಶಾಂತ್, ದ್ವಿತೀಯ ಪಿಯುಸಿಯಲ್ಲಿ ಪ್ರೇಕ್ಷಾ - ಪ್ರಜ್ಞಾ, ಮೋಕ್ಷಾ- ಮೋಕ್ಷಿತಾ ಎಂಬ ಅವಳಿಗಳಿದ್ದಾರೆ. ಟೋಟಲಿ ಈ ಶಾಲೆಯಲ್ಲಿನ ಅವಳಿ ಮಕ್ಕಳ ಜೋಡಿ ಮೋಡಿ ಮಾಡುತ್ತಿದೆ.

Edited By : Nagesh Gaonkar
PublicNext

PublicNext

04/12/2021 09:40 pm

Cinque Terre

111.63 K

Cinque Terre

7

ಸಂಬಂಧಿತ ಸುದ್ದಿ