ಚಿಕ್ಕಮಗಳೂರು:ಹಿಂದು-ಮುಸ್ಲಿಂ ಅಂತ ಹೊಡೆದಾಟ ಇನ್ನೂ ಇದೆ. ಅದರ ಪರಿಣಾಮ ಬೇರೆ ರೂಪದಲ್ಲಿಯೆ ಈಗ ಆಗುತ್ತಿದೆ. ಅದು ಬಿಡಿ, ನಾವ್ ಹೇಳ್ತಿರೋದು ಕೇವಲ 23 ವರ್ಷದ ಅವೇಜ್ ಅಹ್ಮದ್ ಎಂಬ ಹುಡುಗನ ಕಥೆ. ಈತ ಮಧ್ಯಮ ವರ್ಗದ ಜಾಣ ಹುಡುಗ.ಈತನ ಸಾಧನೆ ಖಾಸಗಿ ಉಪಗ್ರಹ ತಯಾರಿಸಿರೋದು. ಅದನ್ನ ಭಾರತದಲ್ಲಿಯೇ ಉಡಾಸೋಕೆ ಇಸ್ರೋ ಕೂಡ ಒಪ್ಪಿರೋದು. ಆ ಕಥೆ ಇಲ್ಲಿದೆ ನೋಡಿ.
ಅವೇಜ್ ಅಹ್ಮದ್ ತಯಾರಿಸಿರೋ ಖಾಸಗಿ ಉಪಗ್ರಹ ವಿಶೇಷವಾಗಿಯೇ ಇದೆ. ಬೇರೆ ಉಪಗ್ರಹಗಳಿತಿಂಗಳೂ ಇದು 50 ರಷ್ಟು ವೇಗವಾಗಿ ಡಾಟಾ ರವಾನಿಸುತ್ತದೆ. ಇಂತಹ ಸ್ಪೆಷಲ್ ಉಪಗ್ರಹವನ್ನ ತಯಾರಿಸಿರೋ ಈ ವಿಜ್ಞಾನಿ ಕರ್ನಾಟಕದವರೇ,ಅದರಲ್ಲೂ ಕಾಫಿನಾಡು ಚಿಕ್ಕಮಂಗಳೂರಿನವ್ರೇ. ಅಪ್ಪ ಮೆಡಿಕಲ್ ಶಾಪ್ ಇಟ್ಟುಕೊಂಡು ಮಗನ ಓದಿಸಿದ್ದಾರೆ. ಮಗನ ಸಾಧನೆ ಕಂಡು ಈಗ ಹೆಮ್ಮೆ ಪಡುತ್ತಿದ್ದಾರೆ.
ಉಪಗ್ರಹ ಉಡಾವಣೆ ಸಂಬಂಧಿಸಿದಂತೆ ಅವೇಜ್ ಅಹ್ಮದ್ ಈಗಾಗಲೇ ಎರಡು ಸಲ ಪ್ರಧಾನಿ ಮೋದಿ ಜೊತೆಗೆ ಮಾತುಕಥೆ ಮಾಡಿದ್ದಾರೆ. ಕಳೆದ ಡಿಸೆಂಬರ್ ನಲ್ಲಿಯೇ ಉಪಗ್ರಹ ಉಡಾವಣೆ ಆಗಬೇಕಿತ್ತು. ಕೊರೊನಾ ಕಾರಣ ಅದು ಸಾಧ್ಯವಾಗಿಲ್ಲ. ಇಸ್ರೋ ದಿನಾಂಕ ನಿಗದಿ ಪಡಿಸಬೇಕಿದೆ. ಇನ್ನೂ ಒಂದು ವಿಷಯ ಏನಂದ್ರೆ, ಅವೇಜ್ ರೆಡಿ ಮಾಡಿರೋ ಉಪಗ್ರಹ ರಷ್ಯಾದಿಂದಲೇ ಹಾರೋದಿತ್ತು.ವಿಷಯ ತಿಳಿದ ಕೇಂದ್ರ ಸರ್ಕಾರ ಭಾರತದಲ್ಲಿಯೇ ಉಪಗ್ರಹ ಉಡಾವಣೆಗೆ ಎಲ್ಲ ವ್ಯವಸ್ಥೆ ಮಾಡುತ್ತೇವೆ ಅಂದ್ಮೇಲೆ, ಅವೇಜ್ ತಮ್ಮ ಉಪಗ್ರಹವನ್ನ ಭಾರತದಲ್ಲಿಯೇ ಮಾಡುತ್ತಿದ್ದಾರೆ. ಭಾರತಕ್ಕೇನೆ ನನ್ನ ಸಾಧನೆ ಮೀಸಲು ಅಂತಿದ್ದಾರೆ ಅವೇಜ್.
PublicNext
20/10/2021 06:11 pm