ಲಖಿಸರಾಯ್(ಬಿಹಾರ): ಏನ್ರೀ ಶಾಲೆಗೆ ಈ ತರ ದಿರಿಸು ಧರಿಸಿ ಬರ್ತಾರಾ? ನೀವೇನು ಪಾಠ ಮಾಡೋದಿಕ್ಕೆ ಬಂದಿದ್ದೀರಾ? ಅಥವಾ ವೋಟ್ ಕೇಳಲು ಬಂದಿದ್ದಿರಾ? ನೀವು ರಾಜಕಾರಣಿಯೋ ಅಥವಾ ಶಿಕ್ಷಕನೋ?
ಹೀಗಂತಾ ಬಿಹಾರದ ಲಖಿಸರಾಯ್ ಜಿಲ್ಲೆಯ ಮ್ಯಾಜಿಸ್ಟ್ರೇಟ್ ಸ್ಥಳೀಯ ಶಾಲೆಯ ಮುಖ್ಯ ಶಿಕ್ಷಕರೊಬ್ಬರ ಮೇಲೆ ಈ ರೀತಿ ಕೆಂಡಾಮಂಡಲರಾಗಿದ್ದಾರೆ.
ಬಿಹಾರದ ಸದರ್ ಬ್ಲಾಕ್‌ಗೆ ಒಳಪಡುವ ಬಲ್ಗುದಾರ್ ಪ್ರಾಥಮಿಕ ಶಾಲೆಯಲ್ಲಿ ಈ ಘಟನೆ ನಡೆದಿದೆ. ಸಾಂಪ್ರದಾಯಿಕ ಶೈಲಿಯ ಕುರ್ತಾ ಪೈಜಾಮ್ ಧರಿಸಿದ್ದ ಮುಖ್ಯ ಶಿಕ್ಷಕ ಎಂದಿನಂತೆ ಶಾಲೆಗೆ ಬಂದಿದ್ದಾರೆ. ಈ ವೇಳೆ ಪರಿಶೀಲನೆಗೆ ಬಂದಿದ್ದ ಜಿಲ್ಲಾ ಮ್ಯಾಜಿಸ್ಟ್ರೇಟ್ ಶಿಕ್ಷಕರ ಮೇಲೆ ಕೆಂಡ ಕಾರಿದ್ದಾರೆ. ಮತ್ತು ಸಾಂಪ್ರದಾಯಿಕ ದಿರಿಸು ಧರಿಸಿದ್ದ ಮುಖ್ಯ ಶಿಕ್ಷಕನ ಮೇಲೆ ಕೆಂಡ ಕಾರಿದ ಮ್ಯಾಜಿಸ್ಟ್ರೇಟ್ ಸಂಬಳ ತಡೆ ಹಿಡಿದಿದ್ದಾಳೆ.
ಮ್ಯಾಜಿಸ್ಟೇಟ್ ಕೈಗೊಂಡ ಕ್ರಮದ ವಿರುದ್ಧ ಶಿಕ್ಶಕ ಸಮುದಾಯದಿಂದ ಆಕ್ರೋಶ ವ್ಯಕ್ತವಾಗಿದೆ. ಶಾಲೆಯಲ್ಲಿ ವಿದ್ಯುತ್ ಸಂಪರ್ಕ ಸೇರಿ ಹಲವು ಮೂಲಭೂತ ಸೌಕರ್ಯಗಳಿಲ್ಲ. ಮ್ಯಾಜಿಸ್ಟ್ರೇಟರು ಈ ಬಗ್ಗೆ ಗಮನಹರಿಸೋದು ಬಿಟ್ಟು ನಮ್ಮ ಡ್ರೆಸ್ ಬಗ್ಗೆ ಹೆಚ್ಚು ಗಮನ ಹರಿಸಿದ್ದಾರೆ ಎಂದು ಶಿಕ್ಷಕರು ಅಸಮಾಧಾನಿತರಾಗಿದ್ದಾರೆ.
PublicNext
13/07/2022 04:23 pm